ಹೈದರಾಬಾದ್: ಭಾಷೆ ಬೇರೆ ನೇಟಿವಿಟಿ ಬೇರೆ ಎಂಬ ಮಾತುಗಳ ಕಾಲ ಮುಗಿದಿದೆ. ಭಾವನೆಯೊಂದಿದ್ದರೆ ಸಾಕು, ಭಾಷೆಯನ್ನು ಕಟ್ಟಿಕೊಂಡು ಏನ್ಮಾಡೋಣ? ಎನ್ನುತ್ತಾರೆ ಸಿನಿ ರಸಿಕರು.
ಹೃದಯಸ್ಪರ್ಶಿ ಕಥೆಯಿದ್ದರೆ ನೇಟಿವಿಟಿ ಸಮಸ್ಯೆಯೇ ಅಲ್ಲ. ಪ್ಯಾನ್-ಇಂಡಿಯಾ ಚಲನಚಿತ್ರಗಳಿಗೆ ಹೆಚ್ಚು ಅನುಕೂಲಕರ ವಾತಾವರಣವನ್ನೇ ಆಯ್ದುಕೊಂಡ ಕಥೆಯನ್ನು ದೇಶಾದ್ಯಂತ ಪ್ರೇಕ್ಷಕರಿಗೆ ತೋರಿಸುವ ಉದ್ದೇಶದಿಂದ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇದರಲ್ಲಿ ತೆಲುಗು, ಕನ್ನಡ ಸಿನಿಮಾಗಳು ಸಾಕಷ್ಟು ಯಶಸ್ಸು ಕಾಣುತ್ತಿವೆ.
ಈ ವರ್ಷದಲ್ಲಿ ದಕ್ಷಿಣದ ಪ್ಯಾನ್-ಇಂಡಿಯನ್ ಚಲನಚಿತ್ರಗಳ ಸಾಮರ್ಥ್ಯವನ್ನು ತೆಲುಗಿನ 'ಪುಷ್ಪ' ಮತ್ತೊಮ್ಮೆ ಸಾಬೀತು ಮಾಡಿದೆ. ಬಾಹುಬಲಿ, ಕೆಜಿಎಫ್ ಚಿತ್ರಗಳ ಸಕ್ಸಸ್ ಈ ಟ್ರೆಂಡ್‌ಗೆ ಸ್ಫೂರ್ತಿ ನೀಡುವುದರಲ್ಲಿ ಸಂಶಯವಿಲ್ಲ. ಈ ಸಿನಿಮಾಗಳು ಮಲಯಾಳಂನಿಂದ ಹಿಂದಿಯವರೆಗೆ ಎಲ್ಲಾ ಭಾಷೆಗಳನ್ನೂ ಒಂದುಗೂಡಿಸಿವೆ.
ಈಗ ಆರ್‌ಆರ್‌ಆರ್, ಕೆಜಿಎಫ್-2 ಹಾಗೂ ರಾಧೆಶ್ಯಾಮ್ ಸರದಿಯಾಗಿದೆ. ಈ ಮೂರು ಸಿನಿಮಾಗಳು ಕಳೆದ ನಾಲ್ಕು ವರ್ಷಗಳಿಂದ ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದು, ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ.
ನೂರಾರು ವರ್ಷಗಳ ನಂತರ ರಾಜಮೌಳಿ ಅವರಿಂದಾಗಿ ನಾವು ಭಾರತೀಯ ಚಿತ್ರಗಳನ್ನು ಮಾಡುತ್ತಿದ್ದೇವೆ. ನನ್ನ ದೃಷ್ಟಿಯಲ್ಲಿ ನಾವು ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡಲು ಈಗಾಗಲೇ ತಡವಾಗಿದೆ ಎಂದು ನಟ ಪ್ರಭಾಸ್ ಹೇಳುತ್ತಾರೆ.
ಬಾಹುಬಲಿ ನಂತರ ಪ್ರಭಾಸ್ ಆಯ್ಕೆ ಮಾಡುವ ಪ್ರತಿಯೊಂದು ಚಿತ್ರವೂ ಪಾನ್-ಇಂಡಿಯನ್ ಮಾರುಕಟ್ಟೆಯನ್ನು ಗುರಿಯಾಗಿರಿಸಿದೆ ಎಂಬುದು ಗಮನಾರ್ಹ. ಅದರ ಭಾಗವಾಗಿ ರಾಧಾಕೃಷ್ಣ ಕುಮಾರ್ ಅವರ ನಿರ್ದೇಶನದಲ್ಲಿ ‘ರಾಧೆಶ್ಯಾಮ್’ ಮಾಡಲಾಗಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. 300 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸಿನಿಮಾದ ಪ್ರೇಮಕಥೆ ನಿರ್ಮಿಸಲಾಗಿದೆ.
ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಅದೃಷ್ಟ ಪರೀಕ್ಷೆ: ಬಾಹುಬಲಿ ನಂತರ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಮತ್ತೊಂದು ಪ್ಯಾನ್-ಇಂಡಿಯಾ ಚಿತ್ರ ಆರ್‌ಆರ್‌ಆರ್. ಜೂ.ಎನ್‌ಟಿಆರ್ ಮತ್ತು ರಾಮಚರಣ್ ನಾಯಕರಾಗಿ ನಟಿಸಿರುವ ಈ ಸಿನಿಮಾ ದೇಶಾದ್ಯಂತ ಕುತೂಹಲ ಹೆಚ್ಚಿಸಿದೆ. ಈ ಚಿತ್ರ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಉದ್ಯಮದ ಮೂಲಗಳು ಅಂದಾಜಿಸುತ್ತವೆ.
ರಾಜಮೌಳಿ ಅವರು ಅಲ್ಲೂರಿ ಸೀತಾರಾಮರಾಜ್ ಮತ್ತು ಕೊಮರಂ ಭೀಮ್ ಪಾತ್ರಗಳೊಂದಿಗೆ ಕಾಲ್ಪನಿಕ ಕಥೆಯೊಂದಿಗೆ ಈ ಚಿತ್ರವನ್ನು ಮಾಡಿದ್ದಾರೆ. ಎನ್‌ಟಿಆರ್ ಮತ್ತು ರಾಮಚರಣ್ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 'ರಾಧೆಶ್ಯಾಮ್', 'ಆರ್‌ಆರ್‌ಆರ್ ' ಎರಡೂ ಟಾಲಿವುಡ್ ಸಿನಿಮಾಗಳಾಗಿವೆ.
ರಾಕಿಭಾಯ್ ಸೆಕೆಂಡ್ ಎಂಟ್ರಿಗೆ ಕಾತುರ: ಕನ್ನಡ ಇಂಡಸ್ಟ್ರಿಯಿಂದ ಬಂದು ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಪತಾಕೆ ಹಾರಿಸಿ ದೊಡ್ಡ ಹೆಸರು ಮಾಡಿದ ಚಿತ್ರ ಕೆಜಿಎಫ್. ಇದರ ಮುಂದುವರೆದ ಭಾಗವಾಗಲೇ ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಮೊದಲ ಭಾಗಕ್ಕಿಂತ ದೊಡ್ಡ ಹೆಸರು ಮಾಡಲಿದೆ ಎನ್ನುವುದು ಸಿನಿ ಪಂಡಿತರ ಅಭಿಪ್ರಾಯ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ನಿರ್ಮಾಣ 100 ಕೋಟಿ ರೂ. ಖರ್ಚಾಗಿದೆ.
ಇನ್ನ ಮುಂದಿನ ದಿನಗಳಲ್ಲಿ 'ಆಚಾರ್ಯ', 'ಮೃಗ', 'ಸರ್ಕಾರು ವಾರಿ ಪಟ', 'ಮೇಜರ್' ಹೀಗೆ ಹಲವು ಚಿತ್ರಗಳು ತೆರೆಗೆ ಬರಲಿದ್ದು, ಇವುಗಳಿಗೆ ಸಿನಿ ಪ್ರೇಮಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಏಳು ವರ್ಷಗಳ ಬಳಿಕ ಡೈರೆಕ್ಟರ್ ಕ್ಯಾಪ್ ಧರಿಸಲಿರುವ 'ಬುದ್ಧಿವಂತ'!