ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಮಾಜಿ ಪತ್ನಿ ಅಮೃತಾ ಸಿಂಗ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಬಹುಭಾಷಾ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಲಕ್ ತಿವಾರಿ ಕಾಣಿಸಿಕೊಂಡಿದ್ದಾರೆ. ಆದರೆ, ಕ್ಯಾಮೆರಾ ನೋಡಿ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ.
ಮುಂಬೈನ ಬಾಂದ್ರಾ ಪ್ರದೇಶದಲ್ಲಿ ರೆಸ್ಟೋರೆಂಟ್‌ನಿಂದ ಹೊರ ಬಂದು ಒಂದೇ ಕಾರಿನೊಳಗೆ ಕೂರುವ ವೇಳೆ ಇಬ್ರಾಹಿಂ ಅಲಿ ಖಾನ್ ಹಾಗೂ ಪಲಕ್ ತಿವಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಇವರಿಬ್ಬರು ಹೀಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿವೆ.
ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡ ಪಲಕ್ನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 'ಓವರ್ ಆ್ಯಕ್ಟಿಂಗ್', 'ಇಷ್ಟೆಲ್ಲಾ ಡ್ರಾಮಾ ಯಾಕೆ' ಎಂದು ನೆಟಿಜನ್‌ಗಳು ಕಮೆಂಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಗೆಹ್ರೈಯಾನ್ ಟ್ರೇಲರ್ ಮೆಚ್ಚಿದ ರಣವೀರ್ ಸಿಂಗ್: ಮೈ ಬೇಬಿ ಗರ್ಲ್ ಎಂದ ನಟ
ಇನ್ನು ಪಲಕ್ ತಿವಾರಿ ಅವರು ತಮ್ಮ ಚೊಚ್ಚಲ ಸಿನಿಮಾ 'ರೋಸಿ: ದಿ ಸ್ಯಾಫ್ರಾನ್ ಚಾಪ್ಟರ್' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ವಿಶಾಲ್ ಮಿಶ್ರಾ ನಿರ್ದೇಶಿಸಿದ ಈ ಚಿತ್ರದಲ್ಲಿ ಅರ್ಬಾಜ್ ಖಾನ್, ಮಲ್ಲಿಕಾ ಶೆರಾವತ್ ಮತ್ತು ವಿವೇಕ್ ಒಬೆರಾಯ್ ನಟಿಸಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ ಕರಣ್ ಜೋಹರ್ಗೆ ಸಹಾಯಕ ನಿರ್ದೇಶಕರಾಗಿ ಇಬ್ರಾಹಿಂ ಅಲಿ ಖಾನ್ ಕೆಲಸ ಮಾಡುತ್ತಿದ್ದಾರೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ