ETV Bharat / sitara

ಶಾರುಖ್ ಪುತ್ರಿ ಸುಹಾನಾ ಖಾನ್ ಬರ್ತ್​ಡೇ: ಶುಭಕೋರಿದ ಅನನ್ಯ, ಶನಾಯ - ಅನನ್ಯಾ ಪಾಂಡೆ

ಬಾಲಿವುಡ್​ ನಟ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್​ಗೆ ಇಂದು 21ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಗಳ ಹುಟ್ಟುಹಬ್ಬದಂದು ತಾಯಿ ಗೌರಿ ಖಾನ್ ಸುಹಾನಾ ಅವರ ಅದ್ಭುತ ಫೋಟೋಗಳನ್ನು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿ ಸುಹಾನಾ ಬಾಲ್ಯದ ಗೆಳತಿಯರಾದ ಶನಾಯ ಕಪೂರ್ ಮತ್ತು ಅನನ್ಯಾ ಪಾಂಡೆ ತಮ್ಮ ಬಾಲ್ಯದ ಫೋಟೋಗಳನ್ನ, ವೀಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

suhana
suhana
author img

By

Published : May 22, 2021, 3:44 PM IST

ಹೈದರಾಬಾದ್​: ಬಾಲಿವುಡ್​ ಸೆಲೆಬ್ರೆಟಿಗಳಾದ ನಟ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ದಂಪತಿ ಪುತ್ರಿಯಾದ ಸುಹಾನಾ ಖಾನ್ ತಮ್ಮ 21 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಸುಹಾನಾ ಜನ್ಮದಿನಕ್ಕೆ ಅವರ ಗೆಳತಿಯರಾದ ಅನನ್ಯಾ ಪಾಂಡೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಜೊತೆಗಿನ ಥ್ರೋಬ್ಯಾಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ತಾಯಿ ಗೌರಿ ಖಾನ್​ ತಮ್ಮ ಮುದ್ದಿನ ಮಗಳಿಗೆ ಇನ್​ಸ್ಟಾಗ್ರಾಮ್​ ಮೂಲಕ 'ಜನ್ಮದಿನದ ಶುಭಾಶಯಗಳು .... ನಿನ್ನನ್ನು ಇಂದು, ನಾಳೆ ಮತ್ತು ಯಾವಾಗಲೂ ಪ್ರೀತಿಸುತ್ತೇವೆ.' ಎಂದು ಬರೆದಿದ್ದಾರೆ.

ಗೆಳತಿ ಶನಾಯ ಅವರು ಸುಹಾನಾ ಎಸ್​ಆರ್​ಕೆ ಅಭಿನಯದ ಸಿನಿಮಾದ ಹಾಡೊಂದಕ್ಕೆ ಡ್ಯಾನ್ಸ್​ ಮಾಡಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಗೆಳತಿಗೆ ವಿಷಸ್​ ತಿಳಿಸಿದ್ದಾರೆ ಹಾಗೂ ಶನಾಯ ಅನನ್ಯ ಪಾಂಡೆ ಮತ್ತು ಸುಹಾನಾ ಜೊತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ನಟಿ ಅನನ್ಯ ಪಾಂಡೆ ಇನ್ಸ್​​ಟಾದಲ್ಲಿ ಸುಹಾನಾ ಜೊತೆಗಿನ ಹಳೆಯ ಚಿತ್ರವೊಂದನ್ನು ಶೇರ್​ ಮಾಡಿ, 'ಹ್ಯಾಪಿ ಬರ್ತ್​ಡೇ ಸುಹಾನಾ, ಲವ್​ ಯು' ಎಂದು ವಿಶ್​ ಮಾಡಿದ್ದಾರೆ.

ಬರ್ತ್​ಡೇ ಗರ್ಲ್​​ ಸುಹಾನಾ ನ್ಯೂಯಾರ್ಕ್​​ನಲ್ಲಿ ಚಲನಚಿತ್ರ ನಿರ್ಮಾಣ ಕೋರ್ಸ್​​ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತವಾಗಿ ಅವರು ಮುಂಬೈನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.