ಕೋಲ್ಕತ್ತಾ( ಪಶ್ಚಿಮ ಬಂಗಾಳ): ಸಂಸದೆಯಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಉದ್ಯಮಿ ನಿಖಿಲ್ ಜೈನ್ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕಿ ನುಸ್ರತ್ ಜಹಾನ್, ತಮ್ಮ ಮದುವೆ ಕಾನೂನು ಬದ್ಧವಾಗಿರಲಿಲ್ಲ ಹಾಗೂ ತಾವಿಬ್ಬರೂ ಕೆಲವು ಸಮಯದಿಂದ ದೂರ ಇರುವುದಾಗಿ ಹೇಳಿ ತಮ್ಮ ಸುತ್ತ ಸುತ್ತುತಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
2019 ರಲ್ಲಿ ನಿಖಿಲ್ ಜೊತೆಗಿನ ವಿವಾಹವು ಟರ್ಕಿಶ್ ಕಾನೂನಿನ ಉಲ್ಲಂಘನೆಯಾಗಿದೆ. ಇದು ಭಾರತದಲ್ಲಿ ಮಾನ್ಯವಾಗಿಲ್ಲ. ನುಸ್ರತ್ ತಮ್ಮ ಹೇಳಿಕೆಯಲ್ಲಿ ನಿಖಿಲ್ ಜೈನ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಆಭರಣಗಳು, ಆಸ್ತಿ ಹಾಗೂ ತನ್ನ ವಸ್ತುಗಳನ್ನು ನಿಖಿಲ್ ಅಕ್ರಮವಾಗಿ ವಶಪಡಿಸಿಕೊಂಡಿದ್ದಾನೆ. ತನಗೆ ತಿಳಿಯದೇ ವಿವಿಧ ಖಾತೆಗಳಿಂದ ಹಣ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ನಾನು ಎಂದಿಗೂ ನನ್ನ ವೈಯಕ್ತಿಕ ಜೀವನ ಹಾಗೂ ಇತರರ ಬಗ್ಗೆ ಮಾತನಾಡುವುದಿಲ್ಲ. ಆದ್ದರಿಂದ, ತಮ್ಮನ್ನು ಸಾಮಾನ್ಯ ಜನರು ಎಂದು ಕರೆದುಕೊಳ್ಳುವ ಜನರು ತಮಗೆ ಸೇರದ ಯಾವುದನ್ನೂ ಮನರಂಜಿಸಬಾರದು. 'ನಾವಿಬ್ಬರೂ ಬಹಳ ಹಿಂದೆಯೇ ದೂರವಾಗಿದ್ದೇವೆ. ದೀರ್ಘಕಾಲದವರೆಗೆ ನನ್ನ ಜೀವನದ ಭಾಗವಾಗಿರದ ತಪ್ಪು ವ್ಯಕ್ತಿಯನ್ನು ಪ್ರಶ್ನಿಸದಂತೆ ನಾನು ಮಾಧ್ಯಮವನ್ನು ವಿನಂತಿಸುತ್ತೇನೆ ಎಂದಿದ್ದಾರೆ.
ಓದಿ:ವೃತ್ತಿಗೆ ಕಂಟಕ ತಂದ ಹುಟ್ಟುಹಬ್ಬ.. ಬಡ್ತಿ ಪಡೆದ 10 ದಿನದಲ್ಲೇ ಇನ್ಸ್ಪೆಕ್ಟರ್ ಸಸ್ಪೆಂಡ್!