ETV Bharat / sitara

ಸುಶಾಂತ್ ನೆನಪಿನಲ್ಲಿ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಅಭಿಮಾನಿಗಳು

author img

By

Published : Sep 14, 2020, 4:44 PM IST

ಜೂನ್ 14 ರಂದು ಸಾವನ್ನಪ್ಪಿದ ತನ್ನ ಸಹೋದರನ ನೆನಪಿಗಾಗಿ ಶ್ವೇತಾ 'ಪ್ಲಾಂಟ್ಸ್​​ ಫಾರ್​ ಸುಶಾಂತ್ ಸಿಂಗ್ ರಜಪೂತ್'(#Plants4SSR) ಎಂಬ ಅಭಿಯಾನವನ್ನು ಟ್ವಿಟರ್​​​ನಲ್ಲಿ ಪ್ರಾರಂಭಿಸಿದ್ದರು..

#Plants4SSR
ಸುಶಾಂತ್ ಸಿಂಗ್

ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿ ಮೂರು ತಿಂಗಳ ಬಳಿಕ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಸುಶಾಂತ್​ ಹೆಸರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂಬ ವಿಷಯ ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಅಭಿಮಾನಿಗಳು ಸಸಿಗಳನ್ನು ನೆಡುವುದರ ತುಣುಕುಗಳನ್ನೊಳಗೊಂಡ ವಿಡಿಯೋವನ್ನು ಟ್ವಿಟರ್​ನಲ್ಲಿ ಶ್ವೇತಾ ಸಿಂಗ್ ಪೋಸ್ಟ್​ ಮಾಡಿ, ಪ್ರಪಂಚದಾದ್ಯಂತ 1 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. #Plants4SSR ಅಭಿಯಾನಕ್ಕೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಜೂನ್ 14 ರಂದು ಸಾವನ್ನಪ್ಪಿದ ತನ್ನ ಸಹೋದರನ ನೆನಪಿಗಾಗಿ ಶ್ವೇತಾ 'ಪ್ಲಾಂಟ್ಸ್​​ ಫಾರ್​ ಸುಶಾಂತ್ ಸಿಂಗ್ ರಜಪೂತ್'(#Plants4SSR) ಎಂಬ ಅಭಿಯಾನವನ್ನು ಟ್ವಿಟರ್​​​ನಲ್ಲಿ ಪ್ರಾರಂಭಿಸಿದ್ದರು. ಇದಕ್ಕೆ ಸಾಥ್​ ನೀಡಿದ್ದ ಸುಶಾಂತ್​ ಅಭಿಮಾನಿಗಳು ಗಿಡಗಳನ್ನು ನೆಟ್ಟು, ಅದರ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.