ಹಿಂದಿಯ 'ಯೇ ರಿಶ್ತಾ ಕ್ಯಾ ಕೆಹೆತಾ ಹೇ' ಖ್ಯಾತಿಯ ಜೋಡಿ ಕರಣ್ ಮೆಹ್ರಾ ಮತ್ತು ನಿಶಾ ರಾವಲ್ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಕರಣ್ ಮತ್ತೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಮತ್ತು ಆಭರಣಗಳಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪತ್ನಿ ನಿಶಾ ರಾವಲ್ ಆರೋಪಿಸಿದ್ದಾರೆ.
ಇಬ್ಬರ ನಡುವಿನ ದಾಂಪತ್ಯ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿ, ಪತ್ನಿ ದೂರಿನ ಹಿನ್ನೆಲೆ ಜೈಲು ಸೇರಿದ್ದ ಕರಣ್, ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇತ್ತ ನಿಶಾ ಪತಿ ಕರಣ್ ಮೆಹ್ರಾ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು,ಇಷ್ಟೆಲ್ಲವನ್ನು ಇಷ್ಟು ಕಾಲದವರೆಗೆ ಯಾಕೆ ಸಹಿಸಿಕೊಂಡಿದ್ದೀರಾ ಎಂಬುದಕ್ಕೆ ಉತ್ತರಿಸಿದ ನಿಶಾ, ನನಗೆ ಅವನಿಂದ ದೂರ ಆಗಲು ವಿಚ್ಛೇದನ ಪಡೆಯುವುದಕ್ಕೆ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.