ಮುಂಬೈ: ಕಳೆದ ಸೋಮವಾರ (ನ.15) ಚಂಡೀಗಢದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರಿಯಾಣ ಮೂಲದ ನಟ ರಾಜ್‌ಕುಮಾರ್ ರಾವ್ (Actor Rajkummar Rao ) ಮತ್ತು ಗೆಳತಿ ಪತ್ರಲೇಖಾ (Patralekhaa) ಮುಂಬೈಗೆ ಮರಳಿದ್ದಾರೆ.
ಕನಸಿನ ಮದುವೆ ಮುಗಿದ ನಂತರ ಈ ತಾರಾ ಜೋಡಿ ಬುಧವಾರ ಮುಂಬೈಗೆ ಮರಳಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪಾರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಪತ್ರಲೇಖಾಗೆ ಕ್ಯಾಮರಾಮನ್ಗಳು ಬಾಬಿಜೀ ( Bhabhiji) ಎಂದು ಕರೆದಾಗ ನಾಚಿ ನೀರಾದರು. ಈ ವೇಳೆ ಕೆಂಪು ಬಣ್ಣದ ಸೀರೆ ಧರಿಸಿ ಪತ್ರಲೇಖಾ ಮಿಂಚಿದ್ರೆ, ರಾಜ್‌ಕುಮಾರ್ ರಾವ್ ಬಿಳಿ ಬಣ್ಣದ ಡ್ರೆಸ್ ಧರಿಸಿ ತಮ್ಮ ಗ್ಲಾಮರಸ್ ಲುಕ್ನಿಂದ ಗಮನ ಸೆಳೆದರು.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ವಿವಾಹ ನಡೆದಿತ್ತು. ವಿವಾಹ ಕಾರ್ಯಕ್ರಮಕ್ಕೆ ದಂಪತಿ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರನ್ನು ಮಾತ್ರ ಆಹ್ವಾನಿಸಲಾಗಿತ್ತು. ಮದುವೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತಾರಾ ಜೋಡಿ ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಹಿರಿಯ ನಟಿ ಬಿ.ಸರೋಜಾದೇವಿ ಆರೋಗ್ಯ ವಿಚಾರಿಸಿದ ತಮಿಳು ನಟ ವಿಶಾಲ್