ETV Bharat / sitara

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ಮಾಡಿದ ಪಾಯಲ್​ ಘೋಷ್​! - Anurag Kashyap Latest news

ಬಾಲಿವುಡ್​ ಚಲನಚಿತ್ರ ನಿರ್ಮಾಪಕ ಅನುರಾಗ್​ ಕಶ್ಯಪ್​ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿರುವ ನಟಿ ಪಾಯಲ್​ ಘೋಷ್​​ ಇಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯನ್ನ ಭೇಟಿ ಮಾಡಿದರು.

Payal Ghosh
Payal Ghosh
author img

By

Published : Oct 6, 2020, 7:16 PM IST

ನವದೆಹಲಿ: 2013ರಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಮುಂಬೈ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಿರುವ ನಟಿ ಪಾಯಲ್​ ಘೋಷ್​ ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರನ್ನ ಭೇಟಿ ಮಾಡಿದರು.

ಪಾಯಲ್​ ಘೋಷ್​ ಮಾಹಿತಿ

'Y' ಮಟ್ಟದ ಸೆಕ್ಯುರಿಟಿ ನೀಡುವಂತೆ ನಟಿ ಪಾಯಲ್​ ಘೋಷ್​​ ಮನವಿ!

ಭೇಟಿ ವೇಳೆ ಅವರು ತಮಗೆ ಎಲ್ಲ ರೀತಿಯ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ನಟಿ ಹೇಳಿದ್ದಾರೆ. ಇದೇ ವೇಳೆ ತಾವು ಮಹಾರಾಷ್ಟ್ರ ಗೃಹ ಸಚಿವರಿಗೆ Y ಮಟ್ಟದ ಭದ್ರತೆ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ (ಮೀಟೂ) ಆರೋಪ ಮಾಡಿದ್ದ ನಟಿ ಪಾಯಲ್​ ಘೋಷ್, ವೆರ್ಸೋವ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.