ಮುಂಬೈ: ಮುಂಬೈನ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ.
ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬ ಆದಷ್ಟು ಬೇಗನೆ ಚೇತರಿಕೆಯಾಗಲಿ ಎಂದು ದೇಶಾದ್ಯಂತ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾಗಿರುವ ಅಮಿತಾಬ್, ನಿಮ್ಮ ಎಲ್ಲ ಆಶೀರ್ವಾದವನ್ನು ನಾನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.
-
T 3596 -
— Amitabh Bachchan (@SrBachchan) July 16, 2020 " class="align-text-top noRightClick twitterSection" data="
I receive all your blessings and love and prayers for our well being .. on sms, on whatsapp, on insta on Blog .. and all possible social media ..
my gratitude has no bounds ..
Hospital protocol is restrictive, i cannot say more .. Love 🙏❤️
">T 3596 -
— Amitabh Bachchan (@SrBachchan) July 16, 2020
I receive all your blessings and love and prayers for our well being .. on sms, on whatsapp, on insta on Blog .. and all possible social media ..
my gratitude has no bounds ..
Hospital protocol is restrictive, i cannot say more .. Love 🙏❤️T 3596 -
— Amitabh Bachchan (@SrBachchan) July 16, 2020
I receive all your blessings and love and prayers for our well being .. on sms, on whatsapp, on insta on Blog .. and all possible social media ..
my gratitude has no bounds ..
Hospital protocol is restrictive, i cannot say more .. Love 🙏❤️
ಸಂದೇಶಗಳು (ಎಸ್ಎಂಎಸ್), ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಆರೋಗ್ಯ ವೃದ್ಧಿಗೆ ನಿಮ್ಮ ಎಲ್ಲ ಆಶೀರ್ವಾದ, ಪ್ರೀತಿ ಮತ್ತು ಸಲ್ಲಿಸಿರುವ ಪ್ರಾರ್ಥನೆಗಳನ್ನು ನಾನು ಪ್ರೀತಿ ಪೂರ್ವಕವಾಗಿ ಸ್ವೀಕರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
’’ನಿಮ್ಮ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮ ಅಭಿಮಾನಕ್ಕೆ ಎಂದಿಗೂ ನಾ ಋಣಿ. ಆಸ್ಪತ್ರೆಯ ಪ್ರೋಟೋಕಾಲ್ಗೆ ನಿರ್ಬಂಧಿತನಾಗಿದ್ದೇನೆ. ಹೀಗಾಗಿ, ಇನ್ನೂ ಹೆಚ್ಚು ಹೇಳಲು ಸಾಧ್ಯವಿಲ್ಲ. ಲವ್ ಯೂ’’ ಎಂದು ಹೇಳಿರುವ ಅವರು, ಮತ್ತೊಂದು ಪೋಸ್ಟ್ನಲ್ಲಿ ದೇವರ ಚಿತ್ರವೊಂದನ್ನು ಹಾಕಿ, ನಾನು ದೇವರಿಗೆ ಶರಣಾಗಿದ್ದೇನೆ ಎಂದಿದ್ದಾರೆ.
-
T 3596 - ईश्वर के चरणों में समर्पित 🙏 pic.twitter.com/ByAMUabsxU
— Amitabh Bachchan (@SrBachchan) July 16, 2020 " class="align-text-top noRightClick twitterSection" data="
">T 3596 - ईश्वर के चरणों में समर्पित 🙏 pic.twitter.com/ByAMUabsxU
— Amitabh Bachchan (@SrBachchan) July 16, 2020T 3596 - ईश्वर के चरणों में समर्पित 🙏 pic.twitter.com/ByAMUabsxU
— Amitabh Bachchan (@SrBachchan) July 16, 2020
ಬಿಗ್ ಬಿ ಜೊತೆಗೆ, ಮಗ & ನಟ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಬಚ್ಚನ್ಗೂ ಕೊರೊನಾ ದೃಢಪಟ್ಟಿದೆ. ಅಮಿತಾಬ್ ಬಚ್ಚನ್ ಪತ್ನಿ ವರದಿ ನೆಗಟಿವ್ ಬಂದಿದೆ.