ETV Bharat / sitara

ಉದ್ಯಮಿ ರಾಜ್​ ಕುಂದ್ರಾಗೆ ಜಾಮೀನು ಮಂಜೂರು

ಅಶ್ಲೀಲ ಚಿತ್ರಗಳ ತಯಾರಿ ಪ್ರಕರಣ ಎದುರಿಸುತ್ತಿರುವ ಉದ್ಯಮಿ ರಾಜ್​ ಕುಂದ್ರಾಗೆ ಎರಡು ತಿಂಗಳ ಬಳಿಕ ಇಂದು ಜಾಮೀನು ಸಿಕ್ಕಿದೆ.

Mumbai court grants bail to Raj Kundra
Mumbai court grants bail to Raj Kundra
author img

By

Published : Sep 20, 2021, 6:08 PM IST

Updated : Sep 20, 2021, 6:55 PM IST

ಮುಂಬೈ(ಮಹಾರಾಷ್ಟ್ರ): ಅಶ್ಲೀಲ ಚಿತ್ರಗಳ ತಯಾರಿಕೆ ಸಂಬಂಧ ಗಂಭೀರ ಪ್ರಕರಣ ಎದುರಿಸುತ್ತಿರುವ ಬಾಲಿವುಡ್​ ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್‌ ಇಂದು ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂ ಮೊತ್ತದ ಶೂರಿಟಿ ಬಾಂಡ್​ ನೀಡಲು ಸೂಚನೆ ನೀಡಿರುವ ಕೋರ್ಟ್‌ ಬೇಲ್​ ನೀಡಿದೆ. ಸುಮಾರು 2 ತಿಂಗಳ ಬಳಿಕ ಇದೀಗ ರಾಜ್​ ಕುಂದ್ರಾ ನಿರಾಳರಾಗಿದ್ದಾರೆ.

ಅಶ್ಲೀಲ ಚಿತ್ರ ನಿರ್ಮಾಣ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಉದ್ಯಮಿ ರಾಜ್​ ಕುಂದ್ರಾ ಸೇರಿದಂತೆ ನಾಲ್ವರನ್ನು ಮುಂಬೈ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ಹೇಳಿಕೆ ನೀಡಿದ್ದರು. ರಾಜ್​ ಕುಂದ್ರಾ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಜಾಮೀನು ನೀಡುವಂತೆ ಉದ್ಯಮಿಯ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇವರ ಮನವಿ ಆಲಿಸಿದ ನ್ಯಾಯಾಲಯ ಇಂದು ಜಾಮೀನು ನೀಡಿದೆ.

ಇನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಇತ್ತೀಚೆಗೆ ಉದ್ಯಮಿ ಕುಂದ್ರಾ ವಿರುದ್ಧ ಒಂದೂವರೆ ಸಾವಿರ ಪುಟಗಳ ಚಾರ್ಜ್​​ಶೀಟ್ ಅನ್ನು ನ್ಯಾಯಾಲಯಕ್ಕೆ​ ಸಲ್ಲಿಸಿದ್ದರು. ಪತ್ನಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ತಮ್ಮ ಕಾರ್ಯದಲ್ಲಿ ತಾವು ಮುಳುಗಿದ ಹಿನ್ನೆಲೆ ರಾಜ್​ ಕುಂದ್ರಾ ಏನು ಮಾಡುತ್ತಿದ್ದರು ಎಂಬ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

Last Updated : Sep 20, 2021, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.