ETV Bharat / sitara

ಬ್ಲ್ಯಾಕ್​ ಬಿಕಿನಿಯಲ್ಲಿ ಮೌನಿ ರಾಯ್ ಪೋಸ್​: ಹಾಟ್ ಲುಕ್​ಗೆ ನೆಟ್ಟಿಗರು ಫಿದಾ - ಮೌನಿ ರಾಯ್

ಜನ್ಮದಿನದಂದು ಈಜುಕೊಳದಲ್ಲಿ ನಿಂತು ಕಪ್ಪು ಬಣ್ಣದ ಬಿಕಿನಿ ತೊಟ್ಟ ಫೋಟೋ, ವಿಡಿಯೋ ಶೇರ್ ಮಾಡಿದ ನಟಿ ಮೌನಿ ರಾಯ್​ ಸೌಂದರ್ಯವನ್ನು ಅಭಿಮಾನಿಗಳು ಬಣ್ಣಿಸಿದ್ದಾರೆ.

ಮೌನಿ ರಾಯ್
ಮೌನಿ ರಾಯ್
author img

By

Published : Sep 30, 2021, 6:54 AM IST

Updated : Sep 30, 2021, 7:40 AM IST

ಸೆಪ್ಟೆಂಬರ್​ 28 ರಂದು 36ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್​ ನಟಿ ಮೌನಿ ರಾಯ್ ಗೋವಾದಲ್ಲಿ ಸ್ನೆಹಿತರೊಂದಿಗೆ ಬರ್ತ್​ಡೇ ಆಚರಿಸಿಕೊಂಡಿದ್ದರು. ಅಂದು ಪರಿಪರಿಯ ಉಡುಗೆ ತೊಟ್ಟು ಜಾಲಿ ಮಾಡಿದ್ದ ಮೌನಿಯ ಬಿಕಿನಿ ಲುಕ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಗೋವಾದಲ್ಲಿ ಮೌನಿ ರಾಯ್ ಬರ್ತ್​ಡೇ ಸಂಭ್ರಮ

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅನೇಕ ಫೋಟೋ, ವಿಡಿಯೋಗಳನ್ನು ಮೌನಿ ಹಂಚಿಕೊಂಡಿದ್ದಾರೆ. "ಇಷ್ಟೊಂದು ಪ್ರೀತಿಯನ್ನು ಪಡೆಯಲು ನಾನೇನು ಮಾಡಿರುವೆ ಎಂದು ನನಗೆ ಗೊತ್ತಿಲ್ಲ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ, ಶುಭಾಶಯಗಳಿಗೆ ಕೃತಜ್ಞಳಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಈಜುಕೊಳದಲ್ಲಿ ಕಪ್ಪು ಬಣ್ಣದ ಬಿಕಿನಿ ತೊಟ್ಟಿರುವ ಫೋಟೋ, ವಿಡಿಯೋ ಶೇರ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಆಕೆಯ ಸೌಂದರ್ಯವನ್ನು ಬಣ್ಣಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೌನಿ ರಾಯ್ ; ಪಾರ್ಟಿಯಲ್ಲಿ ಕಣ್ಣೀರು ಹಾಕಿದ್ದು ಯಾಕೆ? ​

ಹಿಂದಿನ 'ನಾಗಿನ್​' ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ಮೌನಿ, ಇದೀಗ ಬಾಲಿವುಡ್​ನಲ್ಲಿ ಸೆನ್ಸೇಷನಲ್​ ನಟಿಯಾಗಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ಮನ ಕದ್ದಿದ್ದ ಈಕೆ ತಮ್ಮ ಮುಂದಿನ ಸಿನಿಮಾ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Last Updated : Sep 30, 2021, 7:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.