ಹೈದರಾಬಾದ್ : ಜನಪ್ರಿಯ ಕಿರುತೆರೆ ನಟಿ ಮೌನಿ ರಾಯ್ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಹೋಳಿ ಹಬ್ಬದಲ್ಲಿ ಮುಳುಗಿದ್ದಾರೆ. ಮದುವೆಯಾದ ಬಳಿಕ ಈ ವರ್ಷದ ಮೊದಲ ಹೋಳಿಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ನಟಿಯು ಬಣ್ಣದಲ್ಲಿ ಮಿಂದೆದ್ದ ತಮ್ಮ ಕಲರ್ಫುಲ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸದ್ಯ ಅವರ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.
ಮೌನಿ ಮತ್ತು ಸೂರಜ್ ಈ ವರ್ಷದ ಜನವರಿ 27ರಂದು ಮಲಯಾಳಿ ಹಾಗೂ ಬಂಗಾಳಿ ಸಂಪ್ರದಾಯದ ಪ್ರಕಾರ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಇದೀಗ ಈ ಜೋಡಿ ಮದುವೆಯ ನಂತರ ಮೊದಲ ಹೋಳಿಯನ್ನು ಈ ರೀತಿಯಾಗಿ ಸವಿಯುತ್ತಿದ್ದಾರೆ.
ಮೌನಿ ಮದುವೆಯ ನಂತರ ಮೊದಲ ಹೋಳಿಗೆ ತಯಾರಿ ನಡೆಸಿದ್ದು, ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪತಿ ಸೂರಜ್‌ಗೆ ಶುಭಾಶಯ ಕೋರಿದ್ದಾರೆ. ಫೋಟೋದಲ್ಲಿ ಮೌನಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮಹತ್ವ ಕೊಟ್ಟಿದ್ದನ್ನು ಗಮನಿಸಬಹುದು.
ಈ ಅದ್ಭುತ ಚಿತ್ರದಲ್ಲಿ ಮೌನಿ ರಾಯ್ ಪತಿ ಸೂರಜ್ ಅವರ ಪಾದಗಳಿಗೆ ಬಣ್ಣಗಳನ್ನು ಲೇಪಿಸುವ ಮೂಲಕ ಹೋಳಿ ಶುಭಾಶಯಗಳನ್ನು ಕೋರಿದ್ದನ್ನು ನೋಡಬಹುದು. ಫೋಟೋ ನೋಡಿದ ಅಭಿಮಾನಿಗಳು, ಹಿತೈಷಿಗಳು ದಂಪತಿಗೆ ಪ್ರತಿಯಾಗಿ ಶುಭಾಶಯ ತಿಳಿಸಿದ್ದಾರೆ.
ಸುಮಾರು 3 ವರ್ಷಗಳ ಕಾಲ ಡೇಟಿಂಗ್ನಲ್ಲಿ ಮುಳುಗಿದ್ದ ಮೌನಿ ಮತ್ತು ಸೂರಜ್ ಗೋವಾದಲ್ಲಿ ಸ್ನೇಹಿತರು ಮತ್ತು ಕೆಲವು ಆಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಇತ್ತೀಚೆಗೆ ಹನಿಮೂನ್ಗೆ ತೆರಳಿದ್ದ ಈ ಜೋಡಿ ಅಲ್ಲಿಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.