ETV Bharat / sitara

Year End 2021: ಯುಟ್ಯೂಬ್​​ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಬಾಲಿವುಡ್​ನ ಆಲ್ಬಮ್​ ಹಾಡುಗಳಿವು..

ಇತ್ತೀಚೆಗೆ ಬಿಡುಗಡೆಯಾದ ನಟಿ ಸನ್ನಿ ಲಿಯೋನ್ ಅವರ ಮಧುಬನ್ ಹಾಡಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಬಾಲಿವುಡ್​ನಲ್ಲಿ ಸಾಕಷ್ಟು ಜನಮನ್ನಣೆಗೆ ಪಾತ್ರವಾದ ಆಲ್ಬಮ್ ಹಾಡುಗಳೂ ಬಿಡುಗಡೆಗೊಂಡಿವೆ. ಅವುಗಳ ಪಟ್ಟಿ ಇಲ್ಲಿದೆ..

Most viewed top 5 bollyood album songs
Year End 2021: ಬಾಲಿವುಡ್​ನಲ್ಲಿ ಧೂಳೆಬ್ಬಿಸಿದ ಐದು ಆಲ್ಬಮ್ ಸಾಂಗ್​ಗಳಿವು
author img

By

Published : Dec 30, 2021, 4:43 AM IST

Updated : Dec 30, 2021, 5:15 AM IST

ಬಾಲಿವುಡ್‌ ಈ ವರ್ಷದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದೆ. ಅದರೊಂದಿಗೆ ಕೆಲವೊಂದು ಹಿಟ್ ಹಾಡುಗಳಿಗೂ ಜನರು ಫಿದಾ ಆಗಿದ್ದಾರೆ. 2021ರ ಇಸವಿಯನ್ನು ದಾಟಿ ನಾವು 2022ಕ್ಕೆ ಕಾಲಿಡುತ್ತಿದ್ದು, ಯೂಟ್ಯೂಬ್ ವೀಕ್ಷಣೆಯ ವಿಚಾರದಲ್ಲಿ ಬಾಲಿವುಡ್​ನ ಟಾಪ್ 5 ಹಾಡುಗಳು ಯಾವುವು ಎಂಬುದನ್ನು ನೋಡೋಣ..

ಫಿಲಾಲ್​-2

  • " class="align-text-top noRightClick twitterSection" data="">

ಬಾಲಿವುಡ್ ನಟ ಅಕ್ಷಯ್ ಕುಮಾರ್, ಆ್ಯಮಿ ವಿರ್ಕ್​ ಮತ್ತು ನೂಪುರ್ ಸನೋನ್ ಕಾಣಿಸಿಕೊಂಡಿರುವ ಫಿಲಾಲ್​-2 ಹಾಡು 2021ರದಲ್ಲಿ ಸಾಕಷ್ಟು ಸದ್ದು ಮಾಡಿದೆ. ಬಿ ಪ್ರಾಕ್ ಈ ಹಾಡಿಗೆ ಹಿನ್ನೆಲೆ ಗಾಯಕರಾಗಿದ್ದಾರೆ. ಈ ಹಾಡನ್ನು ಇಲ್ಲಿಯವರೆಗೆ ಯೂಟ್ಯೂಬ್​​ನಲ್ಲಿ 530 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಈ ಹಾಡಿನ ಮೊದಲ ಭಾಗ ಅಂದರೆ ಫಿಲಾಲ್ -1 2019ರಲ್ಲಿ ಬಿಡುಗಡೆಯಾಗಿತ್ತು.

ಸೈಯಾ ಜಿ

ರ್‍ಯಾಪರ್ ಯೊ ಯೊ ಹನಿ ಸಿಂಗ್ ಈ ವರ್ಷ ಮತ್ತೊಮ್ಮ ಅಬ್ಬರಿಸಿದ್ದಾರೆ. 'ಸೈಯಾ ಜಿ' ಹಾಡಿನ ಮೂಲಕ ನೇಹಾ ಕಕ್ಕರ್ ಜೊತೆಗೂಡಿ ಹನಿಸಿಂಗ್ ಹಾಡಿದ್ದಾರೆ. ಜನವರಿ 27ರಂದು ಬಿಡುಗಡೆಯಾದ 'ಸೈಯಾ ಜಿ' ಹಾಡಿನಲ್ಲಿ ನುಶ್ರತ್​ ಭರೂಚ್ಚ ಅವರು ಹನಿಸಿಂಗ್ ಜೊತೆ ಕಾಣಿಸಿಕೊಂಡಿದ್ದು, ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಈ ಹಾಡು 485 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಪಾನಿ-ಪಾನಿ

ಪ್ರಸಿದ್ಧ ಪಂಜಾಬಿ ಗಾಯಕ ಮತ್ತು ರ್‍ಯಾಪರ್ ಬಾದ್‌ಶಾ ಮತ್ತು ಆಸ್ತಾ ಗಿಲ್​ ಹಾಡಿರುವ 'ಪಾನಿ-ಪಾನಿ' ಹಾಡು ಜೂನ್ 9ರಂದು ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ಬಾಲಿವುಡ್​​ನ ಮಿಲ್ಕಿ ಬ್ಯೂಟಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಂಡಿದ್ದು, ಈ ಹಾಡು 600 ಮಿಲಿಯನ್​​ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಬಾರಿಶ್ ಕಿ ಜಾಯೆ

ಖ್ಯಾತ ಗಾಯಕ ಬಿ ಪ್ರಾಕ್ ಹಾಡಿರುವ 'ಬಾರಿಶ್ ಕಿ ಜಾಯೆ' ಹಾಡು ಬಾಲಿವುಡ್​​ನ ಸಂಗೀತ ಲೋಕದಲ್ಲಿ ತನ್ನದೇ ಅಭಿಮಾನಿಗಳ ಬಳಗವನ್ನು ಹುಟ್ಟುಹಾಕಿಕೊಂಡಿದೆ. ಪಂಜಾಬಿ ಗೀತರಚನೆಕಾರ ಜಾನಿ ಬರೆದಿರುವ ಈ ಹಾಡು ಯೂಟ್ಯೂಬ್​ನಲ್ಲಿ 480 ಮಿಲಿಯನ್​ಗಿಂತ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ನವಾಜುದ್ದೀನ್ ಸಿದ್ದಿಕಿ ಮತ್ತು ಸುನಂದಾ ಶರ್ಮಾ ಅವರ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಲುಟ್​ ಗಯೇ

ಟಿ- ಸಿರೀಸ್​ನ ಆಲ್ಬಮ್ ಸಾಂಗ್ ಆದ ಲುಟ್​ ಗಯೇ ಪ್ರೇಮಿಗಳ ದಿನದಂದು ಬಿಡುಗಡೆಯಾಗಿ ಯೂಟ್ಯೂಬ್​ನಲ್ಲಿ ಅಬ್ಬರಿಸಿತ್ತು. ತಮ್ಮ ಅತ್ಯದ್ಭುತ ಕಂಠದ ಮೂಲಕ ಮನ್ನಣೆ ಗಳಿಸಿದ ಜುಬಿನ್ ನಟಿಯಾಲ್ ಈ ಹಾಡು ಹಾಡಿದ್ದರು. ಈ ಹಾಡು 100 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ನಟ ಇಮ್ರಾನ್ ಹಶ್ಮಿ ಮತ್ತು ರೂಪದರ್ಶಿಯಾಗಿದ್ದ ಯುಕ್ತಿ ಕಾಣಿಸಿಕೊಂಡಿದ್ದರು.

ಮಧುಬನ್ ಮೇ ರಾಧಿಕಾ ನಾಚೆ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸನ್ನಿ ಲಿಯೋನ್ ಅವರ 'ಮಧುಬನ್ ಮೇ ರಾಧಿಕಾ ನಾಚೆ' ಹಾಡಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಾಡೂ ಕೂಡಾ ಯೂಟ್ಯೂಬ್​​ನಲ್ಲಿ ಅಬ್ಬರಿಸುತ್ತಿದೆ.ಗಾಯಕಿ ಕನಿಕಾ ಕಪೂರ್ ಈ ಹಾಡನ್ನು ಹಾಡಿದ್ದು, ಈ ಹಿಂದೆ ಬೇಬಿ ಡಾಲ್​ ಸೆ ಸೋನೆ ದಿ ಹಾಡಿನಲ್ಲಿ ಇಬ್ಬರೂ ಜೊತೆಯಾಗಿದ್ದರು.

ಇದನ್ನೂ ಓದಿ: Bollywood in 2021: ಕೊರೊನಾ ನಡುವೆಯೂ ಅತಿ ಹೆಚ್ಚು ಗಳಿಸಿದ ಬಾಲಿವುಡ್ ಸಿನಿಮಾಗಳು

Last Updated : Dec 30, 2021, 5:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.