ETV Bharat / sitara

Sushant Singh Birthday : ವಿಡಿಯೋದೊಂದಿಗೆ Miss U Much ಎಂದು ಬರೆದುಕೊಂಡ ನಟಿ ರಿಯಾ - ನಟಿ ರಿಯಾ ಚಕ್ರವರ್ತಿಯಿಂದ ಹುಟ್ಟುಹಬ್ಬಕ್ಕೆ ಶುಭಾಶಯ

ನಟಿ ರಿಯಾ ಹಂಚಿಕೊಂಡಿರುವ ವಿಡಿಯೋವನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಸುಶಾಂತ್​ ಜನ್ಮದಿನದ ಪ್ರಯುಕ್ತ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ..

sds
ಇಂದು ದಿ. ನಟ ಸುಶಾಂತ್​ ಸಿಂಗ್ ಅವರ 36ನೇ ವರ್ಷದ ಜನ್ಮದಿನ
author img

By

Published : Jan 21, 2022, 8:31 PM IST

ಮುಂಬೈ : ನಟ ಸುಶಾಂತ್​ ಸಿಂಗ್​ (Sushant Singh) ಬದುಕಿದ್ದರೆ ಇಂದು 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುತ್ತಿದ್ದರು. ಆದ್ರೆ, ಅವರು ಇಂದು ನಮ್ಮೊಂದಿಗೆ ಇಲ್ಲ. ನಟಿ ರಿಯಾ ಚಕ್ರವರ್ತಿ ಇಂದು ಅವರನ್ನು ನೆನಪಿಸಿಕೊಂಡಿದ್ದಾರೆ.

ಕೆಲವು ವರ್ಷಗಳಿಂದ ಸುಶಾಂತ್‌ರೊಂದಿಗೆ ಡೇಟಿಂಗ್ ನಡೆಸುತ್ತಿದ್ದ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಶಾಂತ್‌ರೊಂದಿಗಿನ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿರುವುದರೊಂದಿಗೆ ಮಿಸ್ ಯೂ ಸೋ ಮಚ್ ಎಂದು ಬರೆದುಕೊಂಡಿದ್ದಾರೆ. 34 ವರ್ಷದ ನಟ ಜೂನ್ 14, 2020ರಂದು ಉಪನಗರ ಬಾಂದ್ರಾದಲ್ಲಿನ ತಮ್ಮ ಅಪಾರ್ಟ್​ಮೆಂಟ್​​ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಸುಶಾಂತ್​ ಸಿಂಗ್ ಜತೆ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಸೆರೆ ಹಿಡಿದ ವಿಡಿಯೋವೊಂದನ್ನು ರಿಯಾ ಹಂಚಿಕೊಂಡಿದ್ದಾರೆ. "ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ" ಎಂದು ನಟಿ ಹೃದಯದ ಎಮೋಜಿಯೊಂದಿಗೆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: 'RRR' ರಿಲೀಸ್‌ಗೆ ಹೊಸ ದಿನಾಂಕ ಫಿಕ್ಸ್‌.. ಅಂದಾದ್ರೂ ಬಿಡುಗಡೆಯಾಗುತ್ತಾ ಚಿತ್ರ?

ಸುಶಾಂತ್​ ಸಿಂಗ್ ಸಾವಿಗೆ ಪ್ರಚೋದನೆ ನೀಡಿದ ಮತ್ತು ಅವರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡ ಆರೋಪ ನಟಿ ರಿಯಾ ಚಕ್ರವರ್ತಿ ಮೇಲೆ ಬಂದಿತ್ತು.

2020ರಲ್ಲಿ ಮೇರೆ ಡ್ಯಾಡ್ ಕಿ ಮಾರುತಿ ಮತ್ತು ಜಲೇಬಿಯಂತಹ ಚಿತ್ರಗಳಿಗೆ ನಟಿ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ನಟಿ ಡ್ರಗ್ಸ್ ಪ್ರಕರಣದಲ್ಲಿ 28 ದಿನಗಳ ಕಾಲ ಜೈಲಿನಲ್ಲಿದ್ದು ಬಂದಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

ನಟಿ ರಿಯಾ ಹಂಚಿಕೊಂಡಿರುವ ವಿಡಿಯೋವನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಸುಶಾಂತ್​ ಜನ್ಮದಿನದ ಪ್ರಯುಕ್ತ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.