ಹೈದರಾಬಾದ್ : 2021ರ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಹರ್ನಾಜ್ ಕೌರ್ಗೆ ಮುಂಬೈನ ಎಸ್ಟಾಲಿಯಾದಲ್ಲಿ ಅದ್ಧೂರಿ ಸ್ವಾಗತ ಕೂಟವನ್ನು ಆಯೋಜಿಸಲಾಗಿತ್ತು. ಭವ್ಯ ಕಾರ್ಯಕ್ರಮದಲ್ಲಿ ಬಾಲಿವುಡ್ನ ಕಿರುತೆರೆ ಮತ್ತು ಹಿರಿತೆರೆ ಲೋಕದ ಹಲವು ತಾರೆಯರು ಪಾಲ್ಗೊಂಡಿದ್ದರು.
ಬೆನೆಟ್, ಕೋಲ್‌ಮನ್ & ಕಂ. ಲಿಮಿಟೆಡ್ (ಬಿಸಿಸಿಎಲ್)ನ ವ್ಯವಸ್ಥಾಪಕ ನಿರ್ದೇಶಕರಾದ ವಿನೀತ್ ಜೈನ್ ಹಾಗೂ ಸಮಾಜವಾದಿ ಮುಖಂಡೆ ನಿಶಾ ಜಮ್ವಾಲ್ ಅವರು ಆಯೋಜಿಸಿದ್ದ ಈ ಸ್ವಾಗತ ಕೂಟದಲ್ಲಿ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಭುವನ ಸುಂದರಿಗೆ ಈ ವೇಳೆ ಸ್ವಾಗತ ಮಾಡಿದರು.
- " class="align-text-top noRightClick twitterSection" data="
">
ಭವ್ಯವಾದ ಈ ಸ್ವಾಗತ ಕೂಟದಲ್ಲಿ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಕಪ್ಪು ಮಿನುಗುವ ಗೌನ್ ಧರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಲೈಟ್ ಮೇಕಪ್ ಜೊತೆಗೆ ವೇವಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದ ಅವರು ಪಾರ್ಟಿಯಲ್ಲಿ ಕೇಂದ್ರ ಬಿಂದು ಆಗಿದ್ದರು.
ಹರ್ನಾಜ್ ಕೌರ್ ಅವರ ಅದ್ಧೂರಿ ಸ್ವಾಗತ ಸಮಾರಂಭಕ್ಕೆ ಸಂಗೀತ ನಿರ್ದೇಶಕ ಅನು ಮಲಿಕ್, ನಟಿ ಲೋಪಾಮುದ್ರಾ ರಾವುತ್, ಹಳೆ ಕಾಲದ ನಟ ರಂಜಿತ್, ನಟ ಫರ್ದೀನ್ ಖಾನ್, ಜಾಯೇದ್ ಖಾನ್ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದರು.
- " class="align-text-top noRightClick twitterSection" data="
">
ಇವರಲ್ಲದೆ ಮಿಸ್ ದಿವಾ ಯೂನಿವರ್ಸ್ 2018ರ ನೇಹಲ್ ಚುಡಾಸ್ಮಾ, ಮಿಸ್ಟರ್ ವರ್ಲ್ಡ್ 2016 ರೋಹಿತ್ ಖಂಡೇಲ್ವಾಲ್, ಪ್ರಸಿದ್ಧ ಸೆಲೆಬ್ರಿಟಿ ಛಾಯಾಗ್ರಾಹಕ ದಬ್ಬೂ ರತ್ನಾನಿ, ನಟಿ ಪ್ರೀತಿ ಜಾಂಗಿಯಾನಿ ಮತ್ತು ವಿಂದು ದಾರಾ ಸಿಂಗ್ ಕೂಡ ಹಾಜರಿದ್ದರು.
ಇದನ್ನೂ ಓದಿ: ನ್ಯೂಜೆರ್ಸಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಮಗಳು ಧೃತಿಯಿಂದ ಪೂಜೆ!
ಇತ್ತೀಚೆಗೆ ಇಸ್ರೇಲ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಹರ್ನಾಜ್ ಕೌರ್ ಅವರು ಪರಗ್ವೆ ಹಾಗೂ ದಕ್ಷಿಣ ಆಫ್ರಿಕಾದ ಸ್ಪರ್ಧಿಗಳನ್ನು ಹಿಂದಿಕ್ಕಿ ಭುವನ ಸುಂದರಿ ಕಿರೀಟ ಧರಿಸಿದರು. 21 ವರ್ಷಗಳ ಬಳಿಕ ಭಾರತದ ರೂಪದರ್ಶಿಯೊಬ್ಬರು ಈ ಕಿರೀಟ ಧರಿಸಿದ್ದರಿಂದ ಹೆಮ್ಮೆ ವ್ಯಕ್ತವಾಗಿತ್ತು.