ಮುಂಬೈ: ಮಿಸ್ ಇಂಡಿಯಾ ರನ್ನರ್ ಅಪ್ ಮಾನ್ಯ ಸಿಂಗ್ ಅವರು ತಮ್ಮ ನಡೆಯಿಂದ ಇಂದು ದೇಶದ ಗಮನ ಸೆಳೆದಿದ್ದಾರೆ.
ಹೌದು, ಅವರ ಸ್ಫೂರ್ತಿದಾಯಕ ನಡೆ ಸದ್ಯ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ರನ್ನರ್ ಅಪ್ ಆಗಿರುವ ಮಾನ್ಯ ತನ್ನ ತಂದೆಯ ಆಟೋರಿಕ್ಷಾದಲ್ಲಿ ಸನ್ಮಾನ ಸಮಾರಂಭಕ್ಕೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಫೆಬ್ರವರಿ 12 ರಂದು ಮಾನ್ಯಗೆ ಮಿಸ್ ಇಂಡಿಯಾ ಕಿರೀಟ ನೀಡಿ ಗೌರವಿಸಲಾಗಿತ್ತು. ಆಕೆಯ ಜೀವನದ ಹೋರಾಟಗಳು ಮಾನ್ಯ ಕುಟುಂಬದ ಕನಸನ್ನು ನನಸು ಮಾಡುವತ್ತ ಸಾಗಿದೆ. ಈ ಸೌಂದರ್ಯದ ಖಣಿ ಮಾನ್ಯ ತನ್ನ ಹೆತ್ತವರ ಹೆಮ್ಮೆಯಷ್ಟೇ ಅಲ್ಲದೆ, ಅನೇಕರಿಗೆ ಮಾದರಿ ಸೆಲೆಬ್ರಿಟಿ ಕೂಡಾ ಆಗಿದ್ದಾರೆ.