ETV Bharat / sitara

ಮನೋಜ್‌ ಬಾಜಪೇಯಿಗೆ ಕೊರೊನಾ ಸೋಂಕು; ಹೋಂ ಕ್ವಾರಂಟೈನಲ್ಲಿದ್ದಾರೆ ನಟ - ಕೋವಿಡ್​ ಸೋಂಕಿಗೊಳಗಾದ ನಟ ಮನೋಜ್​ ಬಾಜಪೇಯಿ

ಬಾಲಿವುಡ್ ನಟ ಮನೋಜ್ ಬಾಜಪೇಯಿ ಇದೀಗ ಕೊರೊನಾ ಸೋಂಕಿಗೊಳಗಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅವರ ವಕ್ತಾರರು ಮಾಹಿತಿ ನೀಡಿದ್ದಾರೆ.

Actor Manoj Bajpayee
Actor Manoj Bajpayee
author img

By

Published : Mar 12, 2021, 3:31 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ವೈರಸ್​ ಹಾವಳಿ ಜೋರಾಗಿದೆ. ಇದರ ಬೆನ್ನಲ್ಲೇ ನಟ ಮನೋಜ್​ ಬಾಜಪೇಯಿ (51) ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಕುರಿತು ನಟ ಬಾಜಪೇಯಿ ವಕ್ತಾರ ಮಾಹಿತಿ ನೀಡಿದ್ದು, ಸದ್ಯ ಅವರು ಹೋಂ ಕ್ವಾರಂಟೈನ್​ಗೊಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಕಾನು ಬೆಹ್ಲ್​ ನಿರ್ದೇಶನದ ಡೆಸ್ಲ್ಯಾಚ್​ ಚಿತ್ರದ ಶೂಟಿಂಗ್​ ಪ್ರಾರಂಭಿಸಿದ್ದರು. ಈಗಾಗಲೇ ಈ ಚಿತ್ರದ ನಿರ್ದೇಶಕರಿಗೂ ಕೊರೊನಾ ಸೋಂಕು ತಗುಲಿದ್ದು, ಇದೀಗ ಮನೋಜ್​ ಬಾಜಪೇಯಿ ಕೂಡ ಸೋಂಕಿಗೊಳಗಾಗಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿ ಚುನಾವಣಾ ಆಯುಕ್ತರಾಗಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​!

ಮಹಾರಾಷ್ಟ್ರದಲ್ಲಿ ನಿನ್ನೆ ದಾಖಲೆಯ 14,317 ಜನರಿಗೆ ಕೊರೊನಾ ವೈರಸ್ ದಾಖಲಾಗಿದ್ದು, ಇಲ್ಲಿಯವರೆಗೆ 22,66,374 ಜನರು ಸೋಂಕಿಗೊಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.