ಮುಂಬೈ: ಬಾಲಿವುಡ್ ಬಾದ್ಶಹಾ ಶಾರೂಖ್ ಖಾನ್ ಅವರ ಮನೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದ ಜಿತೇಶ್ ಠಾಕೂರ್ ಬಂಧಿತ ಆರೋಪಿಯಾಗಿದ್ದಾನೆ.
ಜನವರಿ 6 ರಂದು ಆರೋಪಿ ಜಿತೇಶ್ ಮಹಾರಾಷ್ಟ್ರ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯನ್ನು ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಎಂದು ಹೇಳಿದ್ದ. ಇದಲ್ಲದೇ ಮುಂಬೈನ ಹಲವೆಡೆ ಭಯೋತ್ಪಾದಕ ದಾಳಿ ಹಾಗೂ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಕರೆ ಹಾಕಿದ್ದ.
ಅನಾಮಿಕ ಕರೆಯಿಂದ ಭೀತಿಗೊಂಡ ಪೊಲೀಸರು ಕರೆ ಮಾಡಿದ ಸಂಪರ್ಕ ಸಂಖ್ಯೆಯನ್ನು ಟ್ರೇಸ್ ಮಾಡಿದಾಗ ಅದು ಮಧ್ಯಪ್ರದೇಶದ ಜಬಲ್ಪುರದಿಂದ ಬಂದಿದೆ ಎಂದು ಗೊತ್ತಾಗಿದೆ. ಬಳಿಕ ಪೊಲೀಸರು ಆರೋಪಿ ಜಿತೇಶ್ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕೆಲ ದಿನಗಳಿಂದ ಆರೋಪಿ ಜಿತೇಶ್ ನಟ ಶಾರೂಖ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದ.
ಇದನ್ನೂ ಓದಿ: ರಿಯಲ್ ಅಲ್ದೇ ರೀಲ್ನಲ್ಲೂ ಜೋಡಿಯಾಗಲಿದ್ದಾರಾ ವಿಕ್ಯಾಟ್.. ಜೀ ಲೆ ಜರಾ ಸಿನಿಮಾದಲ್ಲಿ ಕತ್ರಿನಾಗೆ ವಿಕ್ಕಿ ಕೌಶಲ್ ನಾಯಕ?