'ಮರ್ಡರ್' ಸಿನಿಮಾ ಎಂದೊಡನೆ ನಮಗೆ ನೆನಪಾಗುವುದು ನಟಿ ಮಲ್ಲಿಕಾ ಶರಾವತ್. ನಟನೆಗಿಂತ ಹೆಚ್ಚಾಗಿ ಗ್ಲಾಮರಸ್ ಹಾಗೂ ಎಕ್ಸ್ಪೋಸ್ನಿಂದಲೇ ಸುದ್ದಿಯಾಗಿದ್ದ ಮಲ್ಲಿಕಾ ಕನ್ನಡದ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ಕೂಡಾ ಗೆಸ್ಟ್ ರೋಲ್ನಲ್ಲಿ ನಟಿಸಿದ್ದಾರೆ.
- " class="align-text-top noRightClick twitterSection" data="
">
ಬಹಳ ದಿನಗಳಿಂದ ನಟನೆಯಿಂದ ಮಲ್ಲಿಕಾ ದೂರವಿದ್ದರೂ ಇದೀಗ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ ಅವರನ್ನು ಭೇಟಿ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ವಾಷಿಂಗ್ಟನ್ನಲ್ಲಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಏರ್ಪಡಿಸಿದ್ದ ಒಂದು ಪಾರ್ಟಿಯಲ್ಲಿ ಮಲ್ಲಿಕಾ ಭಾಗಿಯಾಗಿದ್ದರು. ಈ ಪಾರ್ಟಿಗೆ ಬಿಲ್ಗೇಟ್ಸ್ ಕೂಡಾ ಆಗಮಿಸಿದ್ದರು. ಈ ವೇಳೆ ಮಲ್ಲಿಕಾ, ಬಿಲ್ಗೇಟ್ಸ್ ಜೊತೆ ಸ್ತ್ರೀ ಸಬಲೀಕರಣ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಬಿಲ್ಗೇಟ್ಸ್ ಅವರೊಂದಿಗೆ ಮಹಿಳಾ ಸಬಲೀಕರಣದ ಬಗ್ಗೆ ನಡೆಸಿದ ಚರ್ಚೆಯನ್ನು ಬಹಳ ಎಂಜಾಯ್ ಮಾಡಿದೆ' ಎಂದು ಮಲ್ಲಿಕಾ ಹೇಳಿಕೊಂಡಿದ್ದಾರೆ. 'ಜೀನತ್' ಸಿನಿಮಾ ನಂತರ ಮಲ್ಲಿಕಾ ಅವರ ಯಾವ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ ನಂತರ ' ಭೂ ಸಬ್ಕಿ ಫತೇಗಿ' ಎಂಬ ವೆಬ್ ಸೀರೀಸ್ನಲ್ಲಿ ಅವರು ನಟಿಸಿದ್ದರು. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಸೀಸನ್ 13 ರಲ್ಲೂ ಮಲ್ಲಿಕಾ ಭಾಗವಹಿಸಿದ್ದರು.