ಬಾಲಿವುಡ್ ಮಾದಕ ನಟಿ ಮಲೈಕಾ ಅರೋರಾ ಕರಿಷ್ಮಾ ಕಪೂರ್ ಮತ್ತ ಕರೀನಾ ಕಪೂರ್ ಸಹೋದರಿಯರ ಜೊತೆ ತಮಗಿರುವ ಸಂಬಂಧದ ಕುರಿತು ಮಾತನಾಡಿದ್ದು, ಅವರಿಬ್ಬರೂ ತಮ್ಮ ತಂಗಿ ಅಮೃತಾಳಂತೆ ಎಂದು ಮನಬಿಚ್ಚಿ ಹೇಳಿಕೊಂಡಿದ್ದಾರೆ.
ಬಾಲಿವುಡ್ ಬ್ಯೂಟಿಪುಲ್ ಸಿಸ್ಟರ್ ಪಟ್ಟಿಯಲ್ಲಿರುವ ಕಪೂರ್ ಸಹೋದರಿಯರ ಜೊತೆಗಿನ ಸಂಬಂಧದ ಕುರಿತು ಹೇಳಿದ ಮಲೈಕಾ, ಅವರಲ್ಲಿ ಸಾಕಷ್ಟು ಹೋಲಿಕೆಗಳನ್ನು ಕಂಡು ಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ತಂಗಿ ಅಮೃತಾಳನ್ನು ಪ್ರೀತಿಸುವಷ್ಟು ಅವರನ್ನು ಇಷ್ಟ ಪಡುವುದಾಗಿ ಹೇಳಿದ್ದಾರೆ.