ಹೈದರಾಬಾದ್ (ತೆಲಂಗಾಣ): ನಟಿ, ನರ್ತಕಿ ಮತ್ತು ರೂಪದರ್ಶಿ ಮಲೈಕಾ ಅರೋರಾ ತಮ್ಮ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಆಗಾಗ ತನ್ನ ಮನಮೋಹಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ತಮ್ಮ ಸ್ಟೈಲ್, ಫಿಟ್‌ನೆಸ್‌ನಿಂದ ಅಭಿಮಾನಿಗಳಿಗೆ ಸಲಹೆಗಳನ್ನು ನೀಡುವುದರಲ್ಲಿಯೂ ಅವರು ಪ್ರಸಿದ್ಧರಾಗಿದ್ದಾರೆ.
- " class="align-text-top noRightClick twitterSection" data="
">
ಮಲೈಕಾ ಅವರು ಅನೇಕ ರಿಯಾಲಿಟಿ ಶೋಗಳ ತೀರ್ಪುಗಾರರಾಗಿದ್ದರು. ನಟಿ ಮಲೈಕಾ ಅರೋರಾ ಅವರಿಗೆ ಈಗ 48ರ ಪ್ರಾಯ. ಈ ವಯಸ್ಸಿನಲ್ಲೂ ಅವರು ತಮ್ಮ ಗ್ಲಾಮರ್ನಿಂದ ಗಮನ ಸೆಳೆಯುತ್ತಾರೆ. ಅವರ ಫೋಟೋ ನೋಡಿದ ಅಭಿಮಾನಿಗಳು ಮಲೈಕಾ ಅವರ ಸೌಂದರ್ಯವನ್ನು ಹೊಗಳಿ ಕಾಮೆಂಟ್ ಮಾಡಿದ್ದಾರೆ.
ಕೆಲವು ವಾರಗಳ ಹಿಂದೆ, ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೊತೆಯಾಗಿ ಮಾಲ್ಡೀವ್ಸ್ ತೆರಳಿದರು. ತಮ್ಮ ಮಾಲ್ಡೀವ್ಸ್ ವೆಕೇಷನ್‌ನ ರೊಮ್ಯಾಂಟಿಕ್ ವೀಡಿಯೊಗಳು ಮತ್ತು ಫೋಟೋಗಳನ್ನು ಈ ಕಪಲ್ ಫ್ಯಾನ್ಸ್ ಜತೆ ಶೇರ್ ಮಾಡಿಕೊಂಡಿದ್ದರು.
ನಟ-ನಿರ್ಮಾಪಕ ಅರ್ಬಾಜ್ ಖಾನ್ ಅವರೊಂದಿಗೆ 18 ವರ್ಷಗಳ ಸುದೀರ್ಘ ದಾಂಪತ್ಯದ ಜೀವನ ನಡೆಸಿದ್ದ ಮಲೈಕಾ 2017ರಲ್ಲಿ ವಿಚ್ಛೇದನ ಪಡೆದಿದ್ದರು.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಅಕ್ಷರಾ ಗೌಡ; ಕನ್ನಡದಿಂದ ಬಾಲಿವುಡ್ಗೆ ಹಾರಿದ ಬೋಲ್ಡ್ ಬೆಡಗಿ