ಹೈದರಾಬಾದ್ : ಬಾಲಿವುಡ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಟಿ ಕರಿಷ್ಮಾ ಕಪೂರ್ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ, ಮಲೈಕಾ ಹೈ ಹೀಲ್ಸ್‌ನಲ್ಲಿ ಸಮತೋಲನ ಕಳೆದುಕೊಂಡು ಕೆಳಗೆ ಬೀಳುವುದರಿಂದ ಪಾರಾಗಿದ್ದಾರೆ.
ಕರಿಷ್ಮಾ ಕಪೂರ್ ತಮ್ಮ ನಿವಾಸದಲ್ಲಿ ಆಪ್ತ ಸ್ನೇಹಿತರಿಗಾಗಿ ಗೆಟ್-ಟುಗೆದರ್ ಆಯೋಜಿಸಿದ್ದರು. ಪಾರ್ಟಿಗೆ ಅರ್ಜುನ್ ಮತ್ತು ಮಲೈಕಾ ಜೋಡಿ ಕೂಡ ಆಗಮಿಸಿತ್ತು. ಮಲೈಕಾ ಹಸಿರು ಬಣ್ಣದ ಕೋಟ್ ಮತ್ತು ಶಾರ್ಟ್ ಧರಿಸಿದ್ದರು. ಇತ್ತ ಅರ್ಜುನ್ ಕಪ್ಪು ಬಣ್ಣದ ಔಟ್ ಫಿಟ್ನಲ್ಲಿ ಕೂಲ್ ಆಗಿ ಕಾಣಿಸಿಕೊಂಡರು.
ಮಲೈಕಾ ಹೈ ಹೀಲ್ಸ್ ಧರಿಸಿದ್ದು, ಕಾರಿನಿಂದ ಕೆಳಗಿಳಿಯುವಾಗ ಬ್ಯಾಲೆನ್ಸ್ ಕಳೆದುಕೊಂಡರು. ಆಗ ಅವರ ಹಿಂಬದಿಯಲ್ಲಿದ್ದ ಸಿಬ್ಬಂದಿ ಸಹಾಯಕ್ಕೆ ಬಂದು ಮಾಧ್ಯಮಗಳ ಮುಂದೆ ಮುಜುಗರಕ್ಕೀಡುವುದರಿಂದ ನಟಿಯನ್ನು ರಕ್ಷಿಸಿದರು.
ಕರಿಷ್ಮಾ ಆಯೋಜಿಸಿದ್ದ ಪಾರ್ಟಿಯಲ್ಲಿ ಸಹೋದರಿ ಕರೀನಾ ಕಪೂರ್ ಖಾನ್ ಕುಟುಂಬ ಹಾಗೂ ಅವರ ಆತ್ನೀಯ ಸ್ನೇಹಿತೆ ಅಮೃತಾ ಅರೋರಾ ಸೇರಿದಂತೆ ಕೆಲವರು ಭಾಗವಹಿಸಿದ್ದರು.
ಸದ್ಯ ಅರ್ಜುನ್ ಕಪೂರ್ ಮುಂಬರುವ ಚಿತ್ರ ಕುಟ್ಟೆ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದು, ಮಲೈಕಾ ಡ್ಯಾನ್ಸ್ ರಿಯಾಲಿಟಿ ಶೋ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್- 2 ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಪಾಪ್ ಗಾಯಕಿಗೆ ಕಚ್ಚಿದ ಹಾವು.. ವಿಡಿಯೋ ವೈರಲ್