ETV Bharat / sitara

ಮುಂಬೈನಲ್ಲಿ ಮಾಧುರಿ ದೀಕ್ಷಿತ್ ಹೊಸ ಮನೆ: 3 ಕೋಟಿ ಡೆಪಾಸಿಟ್‌, ತಿಂಗಳ ಬಾಡಿಗೆ ₹12.5 ಲಕ್ಷ

author img

By

Published : Nov 2, 2021, 9:16 PM IST

ಬಾಲಿವುಡ್‌ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್​ ಮುಂಬೈನಲ್ಲಿ ಹೊಸ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದು, ಈ ಮನೆಗೆ ತಿಂಗಳಿಗೆ ಬರೋಬ್ಬರಿ 12.5 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರಂತೆ.

madhuri
ಮಾಧುರಿ ದೀಕ್ಷಿತ್​​

ಮುಂಬೈ: ಪ್ರಖ್ಯಾತ ಬಾಲಿವುಡ್​​ ನಟಿ ಮಾಧುರಿ ದೀಕ್ಷಿತ್ ಮುಂಬೈನಲ್ಲಿ ದುಬಾರಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಮನೆಗೆ ಅವರು ಪ್ರತಿ ತಿಂಗಳು 12.5 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೂರು ವರ್ಷಗಳಿಗೆ ಈ ಅಪಾರ್ಟ್​ಮೆಂಟ್​ ಅನ್ನು ಬಾಡಿಗೆಗೆ ಪಡೆದಿದ್ದು ಈಗಾಗಲೇ 3 ಕೋಟಿ ರೂಪಾಯಿ ಠೇವಣಿ ಪಾವತಿಸಿದ್ದಾರೆ. ಅಕ್ಟೋಬರ್ 26, 2021 ರಂದು ಬಾಡಿಗೆ ಅಗ್ರಿಮೆಂಟ್​​ ನೋಂದಾಯಿಸಲಾಗಿದೆ.

ಆದರೆ ಈ ಬಗ್ಗೆ ಮಾಧುರಿ ಅಥವಾ ಅವರ ಮನೆ ಮಾಲೀಕ ಕಾಜಲ್ ಫ್ಯಾಬಿಯಾನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಾಜಿನಿಂದ ಕೂಡಿದ ಮುಂಭಾಗ ಹೊಂದಿರುವ ಈ ಅಪಾರ್ಟ್​ಮೆಂಟ್​ನಲ್ಲಿ 2BHK, 3BHK ಮತ್ತು 4BHK ವಿಭಾಗಗಳಲ್ಲಿ ಸುಮಾರು 300 ಯೂನಿಟ್​ಗಳಿವೆ ಎಂದು ಸ್ಥಳೀಯ ಬ್ರೋಕರ್​​ಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಇದೇ ಮೊದಲ ಬಾರಿಗೆ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ 'ಅಣ್ಣಾಥೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.