ಹೈದರಾಬಾದ್: ಬಾಲಿವುಡ್ ತಾರೆಗಳಾದ ಮಾಧುರಿ ದೀಕ್ಷಿತ್ ಮತ್ತು ರವೀನಾ ಟಂಡನ್ ಕಿರುತೆರೆಯ ರಿಯಾಲಿಟಿ ಅವರು ಶೋವೊಂದರಲ್ಲಿ ಮಾಡಿದ ಡ್ಯಾನ್ಸ್ ಭಾರಿ ಸಂಚಲನ ಸೃಷ್ಟಿ ಮಾಡಿಸಿದೆ. ಡ್ಯಾನ್ಸ್ ದಿವಾನೆ 3 ರ ವೇದಿಕೆಯ ಮೇಲೆ ಬಂದ ಈ ಇಬ್ಬರು ನಟಿಯವರು ಟಿಪ್ ಟಿಪ್ ಬರ್ಸಾ ಪಾನಿಯಿಂದ ಧಕ್ ಧಕ್ ಕರ್ನೆ ಲಗ ಹಾಡುಗಳಿಗೆ ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದ್ದಾರೆ.
- " class="align-text-top noRightClick twitterSection" data="
">
ಕಲರ್ಸ್ ಟಿವಿಯವರು ಇನ್‌ಸ್ಟಾಗ್ರಾಮ್‌ನಲ್ಲಿ ಕಾರ್ಯಕ್ರಮದ ಪ್ರೋಮೋ ಕ್ಲಿಪ್‌ಗಳನ್ನು ಹಂಚಿಕೊಂಡಿದ್ದಾರೆ. 1994 ರಲ್ಲಿ ಬಿಡುಗಡೆಯಾದ ಮೊಹ್ರಾ ಚಿತ್ರದ ರವೀನಾ ಅವರ ಸೂಪರ್ ಸೆನ್ಸಸ್ ಹಾಡು ’’ಟಿಪ್ ಟಿಪ್ ಬರ್ಸಾ ಪಾನಿ’’ಗೆ ಮಾಧುರಿ ನೃತ್ಯ ಮಾಡಿದ್ದಾರೆ. ಇದರಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1992ರಲ್ಲಿ ಬಿಡುಗಡೆಯಾಗಿದ್ದ ಮಾಧುರಿ ಅವರು ನಟಿಸಿದ್ದ ಬೇಟಾ ಚಿತ್ರದ ’’ಧಕ್ ಧಕ್ ಕರ್ನೆ ಲಗಾ’’ ಹಾಡಿಗೆ ರವೀನಾ ನೃತ್ಯ ಮಾಡಿದ್ದಾರೆ. ರವೀನಾ ಮತ್ತು ಮಾಧುರಿ ನೃತ್ಯ ಮಾಡುವುದರೊಂದಿಗೆ ಪ್ರೋಮೋ ಕೊನೆಗೊಳ್ಳುತ್ತದೆ.
- " class="align-text-top noRightClick twitterSection" data="
">
ವಿಶೇಷವೆಂದರೆ, ಮಾಧುರಿ ಮತ್ತು ರವೀನಾ ದೊಡ್ಡ ಪರದೆಯಲ್ಲಿ ಇದು ವರೆಗೆ ಕಾಣಿಸಿಕೊಂಡಿಲ್ಲ. ರವೀನಾ ಅವರ ಬಡೇ ಮಿಯಾನ್ ಚೋಟೆ ಮಿಯಾನ್ ಮತ್ತು ಘರ್ವಾಲಿ ಬಹರ್ವಾಲಿ ಚಿತ್ರಗಳಲ್ಲಿ ಮಾಧುರಿ ದಿಕ್ಷೀತ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ದೇಶದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದಲ್ಲಿ ರವೀನಾ ನಟಿಸಿದ್ದು, ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಏತನ್ಮಧ್ಯೆ, ಫೈಂಡಿಂಗ್ ಅನಾಮಿಕಾ ಎಂಬ ಥ್ರಿಲ್ಲರ್ ಸರಣಿಯೊಂದಿಗೆ ಮಾಧುರಿ ಅವರು ಒಟಿಟಿಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.