ETV Bharat / sitara

ಮನೆಯಲ್ಲೇ ಲಾಕ್​ಡೌನ್​; ಬರೋಬ್ಬರಿ 2 ತಿಂಗಳ ಬಳಿಕ ಹೊರ ಕಾಲಿಟ್ಟ ಪಿಗ್ಗಿ ಜೋಡಿ

ಲಾಕ್​ಡೌನ್​ನಿಂದಾಗಿ ಪ್ರಿಯಾಂಕಾ ಚೋಪ್ರಾ ಕಳೆದ ಎರಡು ತಿಂಗಳುಗಳಲ್ಲಿ ಮೊದಲ ಬಾರಿಗೆ ತಮ್ಮ ಲಾಸ್ ಏಂಜಲೀಸ್ ಮನೆಯಿಂದ ಹೊರಬಂದಿದ್ದಾರೆ. ಮಾಸ್ಕ್​ ಹಾಕಿರುವ ಫೋಟೋ ಒಂದನ್ನು ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಕೊರೊನಾ ಹೋರಾಟಕ್ಕೆ ಹೆಜ್ಜೆ ಇಟ್ಟಿದ್ದಾರೆ.

PeeCee
ಪ್ರಿಯಾಂಕಾ ಚೋಪ್ರಾ
author img

By

Published : May 12, 2020, 5:57 PM IST

ನವದೆಹಲಿ: ಕೊರೊನಾ ಲಾಕ್‌ಡೌನ್ ಮಧ್ಯೆ ನಟಿ ಪ್ರಿಯಾಂಕಾ ಚೋಪ್ರಾ ಗಾಯಕ ನಿಕ್​ ಜೊನಾಸ್ ಜೋಡಿ ಬರೋಬ್ಬರಿ ಎರಡು ತಿಂಗಳ ಬಳಿಕ ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದಾರೆ.

ಪಿಗ್ಗಿ ಮಾಸ್ಕ್ ಧರಿಸಿಕೊಂಡಿರುವ ಒಂದು ಫೊಟೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಕೊರೊನಾ ಹೊರಾಟಕ್ಕೆ ತನ್ನ ಹೆಜ್ಜೆಯನ್ನು ಇಟ್ಟಿದ್ದಾಳೆ. ಚೋಪ್ರಾ ಪ್ರಸ್ತುತ ಪತಿ ನಿಕ್ ಜೊನಾಸ್ ಅವರೊಂದಿಗೆ ಯುಎಸ್​ನ ಮನೆಯಲ್ಲಿ ವಾಸಿಸುತ್ತಿದ್ದಾರೆ.

'ಕಣ್ಣುಗಳು ಎಂದಿಗೂ ಶಾಂತವಾಗಲ್ಲ. FirstDayOutIn2Months ಮುಖವಾಡಗಳಿಗೆ ಧನ್ಯವಾದಗಳು', ಎಂದು ಅವರು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕೋವಿಡ್​ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಬೆಂಬಲ ನೀಡಲು ಆಕೆ ಹಾಗೂ ಪತಿ ಹಲವಾರು ಚಾರಿಟಿಗಳಿಗೆ ದೇಣಿಗೆ ನೀಡಿ ಸಹಕರಿಸುತ್ತಿದ್ದಾರೆ. ಈ ದಂಪತಿಗಳು ಪಿಎಂ ಕೇರ್ಸ್​ ಫಂಡ್​, ಯುನಿಸೆಫ್(Unicef), ಫೀಡಿಂಗ್​ ಅಮೆರಿಕ ಮತ್ತು ಗೂಂಜ್​ನಂತಹ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ ಎಂದು ಘೋಷಿಸಿದರು. ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಕೆಲಸವನ್ನು ಮಾಡುವ ಮಹಿಳೆಯರಿಗೆ 100,000 ಡಾಲರ್​ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.