ETV Bharat / sitara

'ಊರ್ವಶಿ' ರೌಟೇಲಾ ಹೆಸರು ಸಿಂಹದ ಮರಿಗೆ ಇಟ್ಟ ದುಬೈ ಪ್ರಾಣಿ ಸಂಗ್ರಹಾಲಯ - 'urvashi' rautela

ದುಬೈ ಪ್ರಾಣಿ ಸಂಗ್ರಹಾಲಯದಲ್ಲಿರುವ ಪುಟ್ಟ ಸಿಂಹದ ಮರಿಗೆ ಐರಾವತ ನಾಯಕಿ ಊರ್ವಶಿ ರೌಟೇಲಾ ಅವರ ಹೆಸರನ್ನು ಇಡಲಾಗಿದೆ.

ಐರಾವತ ನಾಯಕಿ ಊರ್ವಶಿ ರೌಟೇಲಾ
ಐರಾವತ ನಾಯಕಿ ಊರ್ವಶಿ ರೌಟೇಲಾ
author img

By

Published : Oct 15, 2020, 10:46 AM IST

ಕನ್ನಡದ ‘ಐರಾವತ’ ಸಿನಿಮಾದಲ್ಲಿ ದರ್ಶನ್ ಜೊತೆ ಅಭಿನಯಿಸಿ ಮಿಂಚಿದ ಪಂಜಾಬಿ ಮೂಲದ ಹುಡುಗಿ ಇದೀಗ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಿಂದಿ ಸಿನಿಮಾದಲ್ಲಿ ‘ಸನಮ್ ರೇ, ಪಾಗಲ್ ಪಂಟಿ ಮೂಲಕ ಹೆಸರು ಮಾಡಿರುವ ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣದಲ್ಲಿ 26 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ್ಗೆ ಹಾಟ್ ಫೋಟೋ ಶೇರ್ ಮಾಡುವುದು ಅವರ ನೆಚ್ಚಿನ ಹವ್ಯಾಸ ಸಹ ಆಗಿಬಿಟ್ಟಿದೆ.

ಐರಾವತ ನಾಯಕಿ ಊರ್ವಶಿ ರೌಟೇಲಾ
ಐರಾವತ ನಾಯಕಿ ಊರ್ವಶಿ ರೌಟೇಲಾ

ಹೊಳಪಿನ ದೇಹ ಸೌಂದರ್ಯಕ್ಕಾಗಿ ಐಶ್ವರ್ಯವಂತರು ಈ ಕ್ಲಿಯೋಪಾತ್ರ ಮಿಲ್ಕ್ ಬಾತ್ ಮಾಡಿಕೊಳ್ಳುವುದು ಪ್ರಚಲಿತ ಇರುವ ವಿಷಯ. ಇದನ್ನೇ ಊರ್ವಶಿ ರೌಟೇಲಾ ‘ಕ್ಲಿಯೋಪಾತ್ರ ಮಿಲ್ಕ್ ಬಾತ್ ಅನುಭವಿಸಿದ ಫೋಟೋ ಸಹ ಶೇರ್ ಮಾಡಿಕೊಂಡಿದ್ದರು. ಆಮೇಲೆ ಅವರು ತೆಲುಗು ಸಿನಿಮಾ ‘ಬ್ಲ್ಯಾಕ್ ರೋಸ್’ ಸಂಪತ್ ನಂದಿ ಕಥೆ ಬರೆದು ಒಂದು ಪಾತ್ರ ಸಹ ಮಾಡುತ್ತಿದ್ದಾರೆ. ‘ಬ್ಲ್ಯಾಕ್ ರೋಸ್’ ಒಂದು ಎಮೋಷನಲ್ ಥ್ರಿಲ್ಲರ್ ಸಿನಿಮಾವಾಗಿದೆ. ಮಣಿ ಶರ್ಮ ಸಂಗೀತ, ಸೌಂದರ್ ರಾಜನ್ ಛಾಯಾಗ್ರಹಣವಿದೆ. ಈ ಚಿತ್ರ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿದ್ಧವಾಗುತ್ತಿದೆ.

ಈಗ ಈ ಬ್ಯೂಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿ ಆಗಲು ಕಾರಣ ಏನು ಗೊತ್ತಾ? ಪುಟ್ಟ ಹೆಣ್ಣು ಸಿಂಹದ ಮರಿಗೆ ಊರ್ವಶಿ ಅವರ ಹೆಸರನ್ನು ಇಡಲಾಗಿದೆ. ಈ ಖುಷಿಯ ವಿಚಾರವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆ ಜಾಕಿ ಚಾನ್ ಹಾಗೂ ರಿಹಾನ ಅವರ ಹೆಸರಿನಲ್ಲಿ ಕಾಡು ಪ್ರಾಣಿಗಳಿಗೆ ಅವರ ಹೆಸರು ಇಡಲಾಗಿತ್ತು. ಈಗ ದುಬೈ ಪ್ರಾಣಿ ಸಂಗ್ರಹಾಲಯದಲ್ಲಿ ಅಲ್ಲಿಯ ಮುಖ್ಯಸ್ಥ ಸೈಫ್ ಅಹಮದ್ ಬೆಲ್ಹಾಸ ಈ ನಿರ್ಧಾರ ಕೈಗೊಡಿದ್ದಾರೆ. ಊರ್ವಶಿ ಸಹ ಪ್ರಾಣಿ ಪ್ರಿಯೆ. ಇವರಿಗೆ ಮೊಸಳೆ, ಹಾವು, ಜಿರಾಫೆ, ಸಿಂಹ ಹಾಗೂ ಲಿಯೋಪರ್ಡ್ ಕಂಡರೆ ತಂಬಾ ಇಷ್ಟವಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.