ETV Bharat / sitara

'ರಾಧೆ ಶ್ಯಾಮ್' ಸಿನಿಮಾ ಬಗ್ಗೆ ದ್ವಂದ್ವ ಹೇಳಿಕೆ ನೀಡಿದ ಚಿತ್ರ ವಿಮರ್ಶಕ! - ರಾಧೆ ಶ್ಯಾಮ್ ಚಿತ್ರದ ನಿರ್ದೇಶಕ

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ರಾಧೆ ಶ್ಯಾಮ್ ಚಿತ್ರ​ ಇಂದು (ಮಾರ್ಚ್​ 11) ಬಿಡುಗಡೆಗೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ, ಚಿತ್ರ ವಿಮರ್ಶಕ ಹಾಗು ನಟ ಕಮಲ್ ಆರ್.ಖಾನ್ ಹೇಳಿದ್ದೇನು ಗೊತ್ತೇ?

KRK shocking reaction on Prabhas and Pooja starrer Radhe Shyam
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ
author img

By

Published : Mar 11, 2022, 4:57 PM IST

ಹೈದರಾಬಾದ್​: ಬಹುನಿರೀಕ್ಷಿತ ರಾಧೆ ಶ್ಯಾಮ್ ಚಿತ್ರ​ ತೆರೆ ಕಂಡಿದ್ದು ಚಿತ್ರ ವಿಮರ್ಶಕ ಕಂ ನಟ ಕಮಲ್ ಆರ್. ಖಾನ್ ಮೆಚ್ಚುಗೆ ವ್ಯಕ್ತಪಡಿಸಿ ಸರಣಿ ಟ್ವೀಟ್​ ಮಾಡಿದ್ದಾರೆ. ಆದರೆ, ಅವರ ಟ್ವೀಟ್​ನಲ್ಲಿ ದ್ವಂದ್ವ ಹೇಳಿಕೆ ಇದ್ದುದರಿಂದ ನೆಟಿಜನ್ಸ್​ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

KRK shocking reaction on Prabhas and Pooja starrer Radhe Shyam
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ

ಚಿತ್ರವು ಮೊದಲಾರ್ಧ ಚೆನ್ನಾಗಿದೆ. ಆದರೆ, ದ್ವಿತೀಯಾರ್ಧ ಮೊದಲಾರ್ಧದಷ್ಟು ಚೆನ್ನಾಗಿಲ್ಲ. ಒಟ್ಟಿನಲ್ಲಿ ರಾಧೆ ಶ್ಯಾಮ್ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಹಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರದ ಎಲ್ಲ ಕ್ರೆಡಿಟ್‌ ನಿರ್ದೇಶಕರಿಗೆ ಸಲ್ಲುತ್ತದೆ ಎಂದಿದ್ದಾರೆ.

ಪ್ರಭಾಸ್ ಮತ್ತು ಪೂಜಾ ಅಭಿನಯದ ರಾಧೆ ಶ್ಯಾಮ್ ಬಗ್ಗೆ KRK ಶಾಕಿಂಗ್ ಪ್ರತಿಕ್ರಿಯೆ
ಕಮಲ್ ಆರ್ ಖಾನ್ ಟ್ವೀಟ್​

ನಾನು ಇಂದು ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಚಿತ್ರವನ್ನು ನೋಡಿದೆ ಎಂದಿರುವ ಕಮಲ್ ಖಾನ್, ಒಂದು ಟ್ವೀಟ್​ನಲ್ಲಿ ಶೇ.100ರಷ್ಟು ಹಿಟ್ ಆಗಲಿದೆ ಎಂದು ಭವಿಷ್ಯ​ ನುಡಿದರೆ ಮತ್ತೊಂದು ಟ್ವೀಟ್​ನಲ್ಲಿ ದ್ವಿತೀಯಾರ್ಧ ಚೆನ್ನಾಗಿಲ್ಲ ಎಂದು ಹೇಳುತ್ತಾರೆ.

ರಾಧೆ ಶ್ಯಾಮ್ ಚಿತ್ರದ ನಿರ್ದೇಶಕರು ಬುದ್ಧಿವಂತರು. ಚಿತ್ರವನ್ನು ಅದ್ಭುತವಾಗಿ ತೋರಿಸಿದ್ದಾರೆ. ಜನರು ಸಹ ಮನಸಾರೆ ಮೆಚ್ಚಿಕೊಂಡಿದ್ದಾರೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅದ್ಭುತವಾಗಿ ನಟಿಸಿದ್ದಾರೆ ಎಂದು ಸರಣಿ ಟ್ವೀಟ್​ ಮಾಡಿದ್ದಾರೆ.

ನಟಿ ಪೂಜಾ ಹೆಗ್ಡೆ

ಖಾನ್ ಬಾಯಿಂದ ಯಾರದೋ ಹೊಗಳಿಕೆಯ ಮಾತುಗಳು ಬಂದಿದ್ದು ಹೇಗೆ ಎಂದು ನೆಟಿಜನ್ಸ್​ ಜಾಲತಾಣದಲ್ಲಿ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಕಳೆದ ವರ್ಷವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದ ಬಿಡುಗಡೆ ದಿನಾಂಕವನ್ನು ಮೂಂದೂಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.