ಹೈದರಾಬಾದ್: ಬಾಲಿವುಡ್ ನಟಿ ಕೃತಿ ಸನೋನ್ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ಗೆ ಸಂಗಾತಿಯಾಗಿ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇಂತಹ ಅದ್ಭುತವಾದ ಪಾತ್ರವನ್ನು ನೀಡಿದ್ದಕ್ಕೆ ಕೃತಿ ನಿರ್ದೇಶಕ ಓಂ ರೌತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
- " class="align-text-top noRightClick twitterSection" data="
">
ಆದಿಪುರುಷ್ ಸಿನಿಮಾವನ್ನು ಓಂ ರೌತ್ ನಿರ್ದೇಶನ ಮಾಡುತ್ತಿದ್ದು, ಭಾರತೀಯ ಮಹಾಕಾವ್ಯದ ರೂಪಾಂತರವಾಗಿದ್ದು, ಅದು ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯದ ಸುತ್ತ ಸುತ್ತುತ್ತದೆ. ಹಿಂದೂ ಪುರಾಣದ ಪ್ರಕಾರ, ಭಗವಾನ್ ರಾಮನನ್ನು ಆದಿಪುರುಷ ಎಂದೂ ಸಂಬೋಧಿಸಲಾಗುತ್ತದೆ. ಧರ್ಮ- ಅಧರ್ಮದ ಯುದ್ದವಾಗಿ ನಡೆದ ರಾಮರಾವಣರ ಯುದ್ದವನ್ನು ಚಿತ್ರವಾಗಿ ಕಟ್ಟುವ ಸಾಧ್ಯತೆಯಿದೆ.
- " class="align-text-top noRightClick twitterSection" data="
">
ಈ ಸಿನಿಮಾದಲ್ಲಿ ಪ್ರಭಾಸ್ಗೆ ಜೊತೆಯಾಗಿ ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸುತ್ತಿದ್ದು, ಭಾರತೀಯ ಪುರಾಣಗಳಲ್ಲಿನ ಅಪತ್ರಿಮ ಸೀತೆಯ ಪಾತ್ರವನ್ನು ನಿರ್ವಹಿಸಲು ಅವಕಾಶ ದೊರಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸೀತೆಯ ಪಾತ್ರ ನೀಡಿದ್ದಕ್ಕೆ ನಿರ್ದೇಶಕ ಓಂ ರೌತ್ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಓದಿ: 'ನನಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ': ಕಂಗನಾ ರಣಾವತ್
ಇನ್ನು ನಟ ಪ್ರಭಾಸ್ ಬಗ್ಗೆ ಮಾತನಾಡಿರುವ ಕೃತಿ, ಮೊದಲು ಅವರನ್ನು ಭೇಟಿ ಮಾಡಿದಾಗ ನಾಚಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ, ಆದರೆ ಒಮ್ಮೆ ಅವರೊಟ್ಟಿಗೆ ಮಾತನಾಡಲು ಆರಂಭಿಸಿದ ಮೇಲೆ ಹೆಚ್ಚು ಆಪ್ತರಾದರು. ಪ್ರಭಾಸ್ ತಿಂಡಿಪೋತನಾಗಿದ್ದು, ಅವರೊಂದಿಗಿನ ಸಹ ನಟರು ತಿಂಡಿಪೋತರಾಗಿದ್ದರೆ ಹೆಚ್ಚು ಪ್ರೀತಿಸುತ್ತಾರೆ ಎಂದರು.
- " class="align-text-top noRightClick twitterSection" data="
">
ಇನ್ನು ಆದಿಪುರುಷ್ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಜನವರಿ 2021ರಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು, 2022ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.