ETV Bharat / sitara

ಸುಶಾಂತ್​ ಸಾವಿನ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ: ಕೋಟಕ್​ ಮಹೀಂದ್ರಾ ಸ್ಪಷ್ಟನೆ - ಸುಶಾಂತ್​ಸಿಂಗ್ ಪ್ರಕರಣ ಸಿಬಿಐ ತನಿಖೆ

ಎಂದಿನಂತೆ ಸುಶಾಂತ್​ ಸಿಂಗ್​ ಪ್ರಕರಣದ ತನಿಖೆಯಲ್ಲೂ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಬ್ಯಾಂಕ್​ ಗ್ರಾಹಕರ ವೈಯುಕ್ತಿಕ ಮತ್ತು ಗೌಪ್ಯ ಮಾಹಿತಿಗಳನ್ನು ಮಾಧ್ಯಮ ಮತ್ತು ಇತರ ಬಾಹ್ಯ ಮೂಲಗಳಿಗೆ ತಿಳಿಸುವುದಿಲ್ಲ ಎಂದು ಕೋಟಕ್ ಮಹೀಂದ್ರಾ ಸ್ಪಷ್ಟಪಡಿಸಿದೆ.

Kotak Mahindra on  SSR Death Case
ಕೋಟಕ್​ ಮಹೀಂದ್ರಾ ಸ್ಪಷ್ಟನೆ
author img

By

Published : Aug 26, 2020, 2:11 PM IST

ಮುಂಬೈ: ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳ ( ಸಿಬಿಐ)ಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಕೋಟಕ್ ಮಹೀಂದ್ರಾ ಸಮೂಹದ ಮುಖ್ಯ ಸಂವಹನಾಧಿಕಾರಿ ರೋಹಿತ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂದಿನಂತೆ ಈ ಪ್ರಕರಣದ ತನಿಖೆಯಲ್ಲೂ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಆದ್ರೆ ಬ್ಯಾಂಕ್​ ಗ್ರಾಹಕರ ವೈಯುಕ್ತಿಕ ಮತ್ತು ಗೌಪ್ಯ ಮಾಹಿತಿಗಳನ್ನು ಮಾಧ್ಯಮ ಮತ್ತು ಇತರ ಬಾಹ್ಯ ಮೂಲಗಳಿಗೆ ತಿಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಯವಿಟ್ಟು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತ ಮತ್ತು ಸುಳ್ಳು ಮಾಹಿತಿಗಳನ್ನು ಹಂಚುತ್ತಿರುವವರಿಗೆ ತಲುಪಿಸಿ ಎಂದು ರಾವ್ ಹೇಳಿದ್ದಾರೆ.

ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ಪಾಟ್ನಾ ಪೊಲೀಸರು ಕೋಟಕ್​ ಮಹಿಂದ್ರಾ ಬ್ಯಾಂಕ್​ ಶಾಖೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ಆಗಸ್ಟ್ 19 ರಂದು ಸುಶಾಂತ್​ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್​ ಆದೇಶಿಸಿತ್ತು. ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರಿದ್ದ ಏಕ ಸದಸ್ಯ ಪೀಠ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಬಿಹಾರ ಸರ್ಕಾರಕ್ಕೆ ಸೂಚಿಸಿತ್ತು ಮತ್ತು ಈವರೆಗೆ ಸಂಗ್ರಹಿಸಿದ ಎಲ್ಲಾ ಸಾಕ್ಷಿಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮುಂಬೈ ಪೊಲೀಸರಿಗೆ ಆದೇಶಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.