ಹೈದರಾಬಾದ್: ನಟಿ ಕಿಮ್ ಶರ್ಮಾ ಮತ್ತು ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ತಮ್ಮ ನಡುವಿನ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಗೋವಾದ ಬೀಚ್ನಲ್ಲಿ ಇಬ್ಬರೂ ಕಾಲ ಕಳೆಯುತ್ತಿರುವ ಫೋಟೋವನ್ನು ಇನ್ಸ್ಟಾಗೆ ಅಪ್ಲೋಡ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಕೆಲ ದಿನಗಳಿಂದ ಕಿಮ್ ಮತ್ತು ಪೇಸ್ ನಡುವಿನ ಸಂಬಂಧದ ಬಗ್ಗೆ ಹಲವು ವದಂತಿಗಳು ಹರಿದಾಡಿದ್ದವು. ಇನ್ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
ಇದನ್ನೂ ಓದಿ: ಪಾಪರಾಜಿ ಕ್ಯಾಮೆರಾ ಕಣ್ಣಿಗೆ ಬಿದ್ದ ಬಾಲಿವುಡ್ ನಟರು
ನಟಿ ಮಾಡಿರುವ ಈ ಪೋಸ್ಟ್ ಅನ್ನು ಲಿಯಾಂಡರ್ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ‘ಮ್ಯಾಜಿಕ್’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಹಿಂದೆ ಕಿಮ್, ನಟ ಹರ್ಷವರ್ಧನ್ ಜತೆ ಸಂಬಂಧ ಹೊಂದಿದ್ದರು.