ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಕತ್ರಿನಾ ಕೈಫ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರದ ಪ್ರಮೋಷನ್ನಲ್ಲಿ ಕತ್ರಿನಾ ಸೀರೆಯುಟ್ಟು ಟ್ರಡಿಷನಲ್ ಲುಕ್ನಲ್ಲಿ ಮಿಂಚಿದ್ದಾರೆ.
- " class="align-text-top noRightClick twitterSection" data="
">
ಕತ್ರಿನಾ ಕೈಫ್ ಕಿತ್ತಳೆ ಬಣ್ಣದ ಸೀರೆಯುಟ್ಟರೆ ನಿರ್ದೇಶಕ ರೋಹಿತ್ ಶೆಟ್ಟಿ ಬಿಳಿ ಧೋತಿ ಹಾಗೂ ಪ್ಯಾಂಟ್ ಜೊತೆಗೆ ಕಂದು ಬಣ್ಣದ ಕುರ್ತಾ ಧರಿಸಿದ್ದರು. ಯಾವಾಗಲೂ ಹಾಟ್ ಮತ್ತು ಬೋಲ್ಡ್ ಲುಕ್ ಮೂಲಕ ಕಾಣಿಸಿಕೊಳ್ಳುತ್ತಿದ್ದ ಕತ್ರಿನಾ ಸೂರ್ಯವಂಶಿ ಚಿತ್ರದ ಪ್ರಮೋಷನ್ನ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡು ಕೇಂದ್ರ ಬಿಂದುವಾದರು.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಿದ್ದು, ರೋಹಿತ್ ಶೆಟ್ಟಿ ಈ ಹಿಂದೆಯೇ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕೊರೊನಾದಿಂದ ಚಿತ್ರದ ಬಿಡುಗಡೆ ಮುಂದೂಡಬೇಕಾಯಿತು. ದೀಪಾವಳಿ ಹಬ್ಬದ ಜೊತೆಗೆ ಡಬಲ್ ಧಮಾಕಾ ಉಡುಗೊರೆ ನೀಡುವ ಸಲುವಾಗಿ ಸೂರ್ಯವಂಶಿ ಚಿತ್ರವನ್ನು ಬರುವ ನ. 5ಕ್ಕೆ ಬಿಡುಗಡೆ ಮಾಡಲಿದ್ದಾರೆ.
- " class="align-text-top noRightClick twitterSection" data="
">
ಸೂರ್ಯವಂಶಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ನಿರ್ದೇಶಕ ರೋಹಿತ್ ಶೆಟ್ಟಿ ಭಾರಿ ಮಟ್ಟದಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ. ಇನ್ನು ಬಹಳ ದಿನಗಳ ಬಳಿಕ ಕತ್ರಿನಾ ಕೈಫ್ ನಟ ಅಕ್ಷಯ್ ಕುಮಾರ್ ಜೊತೆ ಪರದೆ ಹಂಚಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
