ಹೈದರಾಬಾದ್: ಬಾಲಿವುಡ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿದ ಬಳಿಕ ಮುಂಬೈನಲ್ಲಿ ಈ ಸ್ಟಾರ್ ಜೋಡಿ ಹೊಸ ಮನೆ ಮಾಡಿದ್ದು ಗೊತ್ತೇ ಇದೆ.
ಭಾನುವಾರದಂದು ಹೊಸ ಮನೆಯ ಗೃಹಪ್ರವೇಶವೂ ನೆರವೇರಿದೆ. ಪೂಜೆ ಬಳಿಕ ಕತ್ರಿನಾ ಕೈಫ್ ವಿಕ್ಕಿ ಜೊತೆಗಿನ ರೊಮ್ಯಾಂಟಿಕ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ.
ಮುಂಬೈನ ನೂತನ ಮನೆಯಲ್ಲಿ ಮಾಡಲಾದ ಪೂಜಾ ಕಾರ್ಯಕ್ರಮದಲ್ಲಿ ಕತ್ರಿನಾ, ವಿಕ್ಕಿ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವೇಳೆ, ಕತ್ರಿನಾ ಕೈಫ್ ವಿಕ್ಕಿ ಕೌಶಲ್ ಕೈ ಹಿಡಿದಿರುವ ರೊಮ್ಯಾಂಟಿಕ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ 'ಹೋಮ್' ಎಂದು ಬರೆದುಕೊಂಡಿದ್ದು, ಕೆಂಪು ಬಣ್ಣದ ಹೃದಯದ ಇಮೋಜಿ ಕೂಡ ಇದೆ.
ಇದನ್ನೂ ಓದಿ: ಸಹ ನಟನಿಗೆ ದೀಪಿಕಾ ಪಡುಕೋಣೆ ಕಿಸ್: ಗೆಹರಾಯಿಯಾ ಸಿನಿಮಾ ಟೀಸರ್ ವೈರಲ್
ಕತ್ರಿನಾ ಮದುವೆ ವೇಳೆ ಹಚ್ಚಿಕೊಂಡಿದ್ದ ಮದರಂಗಿ ಮತ್ತು ಬಳೆಗಳು ಕೈಯಲ್ಲಿ ರಾರಾಜಿಸುತ್ತಿವೆ. ನಟಿಯ ಈ ಫೋಟೋಗೆ ಅವರ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಸುರಿದಿದ್ದಾರೆ. ಅಲ್ಲದೇ, ಇಬ್ಬರ ಹೊಸ ಬದುಕಿಗೆ ಶುಭಾಶಯ ಕೋರಿದ್ದಾರೆ.
ಇನ್ನು ಮದುವೆಯ ಬಳಿಕ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ವಿಕ್ಕಿ ಕೌಶಲ್ ಗೃಹಪ್ರವೇಶದ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಇಂದೋರ್ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.