ಮುಂಬೈ: ಇತರ ಬಾಲಿವುಡ್ ಸೆಲೆಬ್ರಿಟಿಗಳಂತೆ, ನಟ ಕಾರ್ತಿಕ್ ಆರ್ಯನ್ ಕೂಡ ಗುಲಾಬೊ ಸೀತಾಬೊ ಟಂಗ್ ಟ್ವಿಸ್ಟರ್ ಚಾಲೆಂಜ್ ಕೈಗೆತ್ತಿಕೊಂಡರು. ಆದರೆ, ಅವರ ಕುಟುಂಬದವರು ಅಡ್ಡಿಪಡಿಸುವುದರೊಂದಿಗೆ ತಮಾಷೆಯೊಂದಿಗೆ ಕೊನೆಗೊಳಿಸಿದರು.
ಈ ಹಿಂದೆ ಚಿತ್ರದ ಪ್ರಮುಖ ನಟರಾದ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅವರು ನಟರಿಗೆ, ಇನ್‌ಸ್ಟಾಗ್ರಾಮ್‌ನಲ್ಲಿ, ಟಂಗ್ ಟ್ವಿಸ್ಟರನ್ನು ಐದು ಬಾರಿ ಹೇಳುವಂತೆ ಸವಾಲು ಹಾಕಿದ್ದರು.
ಟಂಗ್ ಟ್ವಿಸ್ಟರ್: 'ಗುಲಾಬೊ ಕಿ ಖತಾರ್-ಪತಾರ್ ಸೆ ಟೈಟಾರ್ - ಬಿಟಾರ್ ಸೀತಾಬೊ, ಸೀತಾಬೊ ಕೆ ಅಗರ್ - ಮಗರ್ ಸೆ ಉತಾಲ್-ಪುತಾಲ್ ಗುಲಾಬೊ' ಇದು ಗುಲಾಬೊ ಸೀತಾಬೊ ಚಿತ್ರದಲ್ಲಿನ ಅವರ ಪಾತ್ರಗಳ ತಮಾಷೆ ಮತ್ತು ವಿಶಿಷ್ಟ ಸೌಹಾರ್ದತೆಯನ್ನು ಪ್ರತಿಬಿಂಬಿಸುತ್ತದೆ.
- " class="align-text-top noRightClick twitterSection" data="
">
ಕಾರ್ತಿಕ್ ಆರ್ಯನ್ ಟಂಗ್ ಟ್ವಿಸ್ಟರ್ ಚಾಲೆಂಜ್‌ನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೊ ಪ್ರಾರಂಭವಾಗುತ್ತಿದ್ದಂತೆ, ಆರ್ಯನ್ ಟಂಗ್ ಟ್ವಿಸ್ಟರ್ ಹೇಳುತ್ತಿದ್ದಂತೆ ಅವರ ತಾಯಿ ಬಂದು ಇಂಟರ್ನೆಟ್ನಲ್ಲಿ ಈಗಾಗಲೇ ಇಂತಹ ಟಂಗ್ ಟ್ವಿಸ್ಟರ್ ವಿಡಿಯೋಗಳೆ ತುಂಬಿದೆ ಎಂದು ಹೇಳಿದ್ದಾರೆ.
ಇದಕ್ಕೆ ಆರ್ಯನ್ ಪ್ರತಿಕ್ರಿಯಿಸಿ, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರೇ ಈ ಸವಾಲು ಸ್ವೀಕರಿಸಲು ನಾಮಿನೇಟ್ ಮಾಡಿದ್ದಾರೆ ಎಂದು ಹೇಳುತ್ತಾರೆ
ಆರ್ಯನ್ ಅವರ ಸಹೋದರಿ ಕೂಡಾ ಅವರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಅವರ ಫೋನ್ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ತಮಾಷೆ ಮುಂದುವರೆಯುತ್ತದೆ. ಫೋನ್ ತೆಗೆದುಕೊಂಡು ತಾಯಿ ಮತ್ತು ಸಹೋದರಿ ಆರ್ಯನ್ ಅವರನ್ನ ಅಪಹಾಸ್ಯ ಮಾಡುವುದರೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.
ಶೂಜಿತ್ ಸಿರ್ಕಾರ್ ಅವರ ಗುಲಾಬೊ ಸೀತಾಬೊ ನೆಟಿಜನ್‌ಗಳ ಮೆಚ್ಚುಗೆ ಪಡೆಯುತ್ತಿದೆ.