ETV Bharat / sitara

ಕೋವಿಡ್​ ನೆಗೆಟಿವ್​ ಖುಷಿ: ಲ್ಯಾಂಬೋರ್ಗಿನಿ ಖರೀದಿ ಮಾಡಿದ ನಟ ಕಾರ್ತಿಕ್​ ಆರ್ಯನ್​!

author img

By

Published : Apr 6, 2021, 3:05 PM IST

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಕೋವಿಡ್​​ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಹೊಸ ಕಾರು ಖರೀದಿ ಮಾಡಿದ್ದು, ಇದರ ವಿಡಿಯೋ ಇನ್​​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿದ್ದಾರೆ.

Kartik Aaryan
Kartik Aaryan

ಹೈದರಾಬಾದ್​: ಮಹಾಮಾರಿ ಕೊರೊನಾ ವೈರಸ್​ಗೊಳಗಾಗಿದ್ದ ನಟ ಕಾರ್ತಿಕ್​​ ಆರ್ಯನ್​ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಇದೇ ಖುಷಿಯಲ್ಲಿ ಬರೋಬ್ಬರಿ 4.5 ಕೋಟಿ ರೂ. ನೀಡಿ ಹೊಸ ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿದ್ದಾರೆ.

ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​​ ಕಳೆದ ಮಾರ್ಚ್​ ತಿಂಗಳಲ್ಲಿ ಡೆಡ್ಲಿ ವೈರಸ್​ ಕೋವಿಡ್​ ಸೋಂಕಿಗೊಳಗಾಗಿದ್ದರು. ಇದೀಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾಗಿರುವ ಅವರು, ಮನೆಯಿಂದ ಹೊರಹೋಗಿ ಕಾರು ಖರೀದಿ ಮಾಡಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಕಾರು ಇಟಲಿಯಿಂದ ಭಾರತಕ್ಕೆ ಏರ್​ಲಿಫ್ಟ್​ ಆಗಿದ್ದು, ಅದಕ್ಕಾಗಿ ಅರ್ಧಕೋಟಿ ಹೆಚ್ಚಿನ ಹಣ ನೀಡಿದ್ದಾರೆ ಎನ್ನಲಾಗಿದೆ. ಇದು ವಿಶ್ವದ ಮೊದಲ ಸೂಪರ್​​ ಸ್ಪೋರ್ಟ್​​ ಕಾರು ಆಗಿದೆ. ಕಾರ್ತಿಕ್​ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಭೂಲ್ ಭೂಲೈಯಾ 2 ದಲ್ಲೂ ನಟನೆ ಮಾಡ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.