ಹೈದರಾಬಾದ್ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಐದು ತಿಂಗಳ ಗರ್ಭಾವಸ್ಥೆಯಲ್ಲಿ ಮುಂಬರುವ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಕೋವಿಡ್-19 ಬಿಕ್ಕಟ್ಟಿನ ಜೊತೆ ತನ್ನ 2ನೇ ಗರ್ಭಾವಸ್ಥೆಯ ಉದ್ದಕ್ಕೂ ಕೆಲಸದಲ್ಲಿ ತೊಡಗಿಕೊಂಡಿದ್ದರ ಬಗ್ಗೆ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಪ್ರಪಂಚ ಕೊರೊನಾದೊಂದಿಗೆ ವ್ಯವಹರಿಸುವಾಗ, ನಾವು ಕೊರೊನಾ ಮತ್ತು ಚಿತ್ರದ ನಾಯಕಿ ಕರೀನಾ ಅವರೊಂದಿಗೆ ವ್ಯವಹರಿಸುತ್ತಿದ್ದೆವು. ಕೊರೊನಾಕ್ಕಿಂತ ಮಿಗಿಲಾಗಿ ಮತ್ತೊಂದು ಗಾಳಿ ನಮ್ಮನ್ನು ಇನ್ನೊಂದು ದಿಕ್ಕಿಗೆ ತಳ್ಳುತ್ತಿತ್ತು ಎಂದು ನಟ ಅಮಿರ್ಖಾನ್ ಅವರು ಶೂಟಿಂಗ್ ಸೆಟ್ನಲ್ಲಿ ಜೊತೆಗಿದ್ದ ಸಹ ನಟಿಯ ಬಗೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸುದ್ದಿವಾಹಿನಿಯೊಂದಿಗಿನ ಸಂಭಾಷಣೆಯಲ್ಲಿ ನಟಿ ಮಾತನಾಡಿದ್ದು, ತನ್ನ ಪತಿ, ನಟ ಸೈಫ್ ಅಲಿಖಾನ್ ಅವರ ಹುಟ್ಟೂರು ಪಟೌಡಿ (ಹರಿಯಾಣ)ಯಿಂದ ಮಗ ತೈಮೂರ್ ಅಲಿಖಾನ್ ಜೊತೆ ಲಾಲ್ಸ್ ಸಿಂಗ್ ಚಡ್ಡಾ ಚಿತ್ರೀಕರಣಕ್ಕಾಗಿ ದೆಹಲಿಗೆ ಪ್ರತಿದಿನ ಹೋಗುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
ಪ್ರತಿದಿನ ಪಟೌಡಿಯಿಂದ ದೆಹಲಿಗೆ ಶೂಟಿಂಗ್ಗಾಗಿ ಪ್ರಯಾಣಿಸುತ್ತಿದ್ದೆ. ಈ ವೇಳೆ ಮಗ ತೈಮೂರ್ ಕೂಡ ನನ್ನೊಂದಿಗಿದ್ದದ್ದರಿಂದ ಪತಿ ಸೈಫ್ನನ್ನು ನನ್ನೊಂದಿಗೆ ಬರುವಂತೆ ವಿನಂತಿಸಿದ್ದೆ. ಕಾರಿನಲ್ಲಿ ನಿತ್ಯವೂ ಒಂದೂವರೆ ಗಂಟೆ ಪ್ರಯಾಣಿಸುತ್ತಿದ್ದೆವು ಹಾಗೂ ಹೆಚ್ಚಾಗಿ ತಡರಾತ್ರಿಯ ವೇಳೆ ಚಿತ್ರೀಕರಣ ಮಾಡುತ್ತಿದ್ದೆವು ಎಂದು ನಟಿ ಹೇಳಿಕೊಂಡಿದ್ದಾರೆ.
ಲಾಲ್ಸಿಂಗ್ ಚಡ್ಡಾ ಸಿನೆಮಾ ಚಿತ್ರೀಕರಣದ ಸಮಯದಲ್ಲಿ ನಟಿ ತನ್ನ ಮಗುವಿನ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದರಂತೆ ಮತ್ತು ಈ ಕಾರಣಕ್ಕೆ ಅವರು ತನ್ನ ಸ್ತ್ರೀರೋಗತಜ್ಞರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
- " class="align-text-top noRightClick twitterSection" data="
">
ಅಮಿರ್ ಖಾನ್ ಮತ್ತು ಕರೀನಾ ಹೊರತುಪಡಿಸಿದರೆ, ಲಾಲ್ ಸಿಂಗ್ ಚಡ್ಡಾ ಸಿನೆಮಾದಲ್ಲಿ ತೆಲುಗು ನಟ ನಾಗ ಚೈತನ್ಯ ಅವರು ಸೇನಾಧಿಕಾರಿಯಾಗಿ ನಟಿಸಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್, ವಯಾಕಾಮ್ 18 ಸ್ಟುಡಿಯೋಸ್ ಮತ್ತು ಪ್ಯಾರಾಮೌಂಟ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಲಾಲ್ ಸಿಂಗ್ ಚಡ್ಡಾ ಈಗಾಗಲೇ ಶ್ರೀನಗರ, ಲಡಾಖ್, ಕಾರ್ಗಿಲ್, ಚಂಡೀಘಡ ಮತ್ತು ಇತರ ಸ್ಥಳಗಳಲ್ಲಿ ಬಹುತೇಕ ಚಿತ್ರೀಕರಣವನ್ನು ಮುಗಿಸಿದೆ.
ಓದಿ: ದುಬಾರಿ ಲ್ಯಾಂಬೋರ್ಗಿನಿ ಕಾರ್ ಖರೀದಿಸಿದ ಟಾಲಿವುಡ್ ನಟ: ಇಂಥಾ ಕಾರು ಖರೀದಿಸಿದ ಮೊದಲ ಭಾರತೀಯ ಇವರೇ.!