ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ನಲ್ಲಿ ಬಯೋಪಿಕ್ಗಳ ಸುರಿಮಳೆಯಾಗುತ್ತಿದೆ. ಹೀಗಿರುವಾಗ ಕರಣ್ ಜೋಹರ್ ಕೂಡ ತಾನೇನು ಕಡಿಮೆ ಇಲ್ಲ ಎಂದು ಬಯೋಪಿಕ್ ಮಾಡುವುದಕ್ಕೆ ಚಿತ್ರ ಮಾಡಲು ಹೊರಟಿದ್ದಾರೆ.
- " class="align-text-top noRightClick twitterSection" data="
">
ಈ ಬಾರಿ ಬಯೋಪಿಕ್ ಆಗುತ್ತಿರುವುದು 'ಜಲಿಯನ್ವಾಲಾ ಬಾಗ್ ಹತ್ಯಾಕಾಂಡ'ದ ಕುರಿತು. ಜನರಲ್ ಡೈರ್ ಎಂಬಾತ ಜಲಿಯನ್ವಾಲಾ ಬಾಗ್ನಲ್ಲಿ ನೂರಾರು ಅಮಾಯಕರನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದ. ಈ ಹತ್ಯಾಕಾಂಡದಿಂದ ರೊಚ್ಚಿಗೆದ್ದ ಭಾರತೀಯರು, ಸ್ವಾತಂತ್ರ್ಯ ಸಂಗ್ರಾಮವನ್ನು ತೀವ್ರಗೊಳಿಸಿದ್ದರು.
ಅಂದು ಜಲಿಯನ್ವಾಲಾ ಬಾಗ್ನಲ್ಲಿ ಏನೇನಾಯಿತು ಎಂದು ಜಗತ್ತಿಗೆ ತಮ್ಮ ವಾದದ ಮೂಲಕ ತಿಳಿಸಿಕೊಟ್ಟವರು ಅಂದಿನ ಖ್ಯಾತ ವಕೀಲರಾದ ಶಂಕರನ್ ನಾಯರ್. ಜಲಿಯನ್ವಾಲಾ ಬಾಗ್ ಮತ್ತು ಶಂಕರನ್ ನಾಯರ್ ಅವರ ಸಾಹಸಗಳ ಕಥೆಯನ್ನು ಹಿಸ್ಟೋರಿಕ್ ಕಂ ಬಯೋಪಿಕ್ ಚಿತ್ರವಾಗಿ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ: ಆ ಒಂದು ಕಾರಣಕ್ಕೆ ಆಮಿರ್ ಖಾನ್ 'ಸಂಜು' ಚಿತ್ರದಿಂದ ದೂರ ಉಳಿದ್ರು: ಏನದು ಗೊತ್ತಾ?
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಕರಣ್ ಜೋಹರ್, ‘ಶಂಕರನ್ ನಾಯರ್ ಎಂಬ ಐತಿಹಾಸಿಕ ಪುರುಷನ ಕುರಿತಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಹೊರಟಿದ್ದೇವೆ. ಈ ಚಿತ್ರವನ್ನು ಕರಣ್ ತ್ಯಾಗಿ ನಿರ್ದೇಶಿಸಲಿದ್ದು, ಸಿದ್ಧತೆಗಳು ಪ್ರಾರಂಭವಾಗಿವೆ. ಈ ಕುರಿತು ಸದ್ಯದಲ್ಲೇ ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೆ, ಈ ಚಿತ್ರಕ್ಕೆ ಸ್ಫೂರ್ತಿಯಾಗಿರುವುದು, ‘ದಿ ಕೇಸ್ ದಟ್ ಶುಕ್ ದಿ ಎಂಪೈರ್’ ಎಂಬ ಕೃತಿ. ಈ ಕೃತಿಯನ್ನು ರಚಿಸಿರುವುದು ಶಂಕರನ್ ನಾಯರ್ ಅವರ ಮೊಮ್ಮಗ ರಘು ಪಾಲಟ್ ಮತ್ತು ಅವರ ಪತ್ನಿ ಪುಷ್ಪಾ ಪಾಲಟ್. ಪಾಲಟ್ ದಂಪತಿ ಜತೆಯಾಗಿ ರಚಿಸಿದ ಈ ಪುಸ್ತಕವನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ. ಸದ್ಯಕ್ಕೆ ಚಿತ್ರದ ಘೋಷಣೆಯಷ್ಟೇ ಆಗಿದೆ. ಸೂಕ್ತ ಪಾತ್ರ ವರ್ಗದ ಆಯ್ಕೆಯಾದ ನಂತರ, ವರ್ಷಾಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ.