ಹೈದರಾಬಾದ್: ಕರಣ್ ಜೋಹರ್ ತಮ್ಮ ನಿರ್ಮಾಣದ 'ಅಜೀಬ್ ದಾಸ್ತಾನ್ಸ್' ವೆಬ್ ಸೀರೀಸ್ನ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. 58 ಸೆಕೆಂಡುಗಳ ಈ ಟೀಸರ್ ಕುತೂಹಲಕಾರಿ ಹಾಗೂ ರೋಚಕವಾಗಿದ್ದು, ಬಿರುಕುಬಿಟ್ಟ ಸಂಬಂಧಗಳ, ಅನಿರೀಕ್ಷಿತ ಕಥೆಗಳ ಒಂದು ನೋಟವನ್ನು ನೀಡುತ್ತದೆ.
ಅಜೀಬ್ ದಾಸ್ತಾನ್ಸ್, ಇದು ಕಯೋಜ್ ಇರಾನಿ, ನೀರಜ್ ಘೈವಾನ್, ರಾಜ್ ಮೆಹ್ತಾ ಮತ್ತು ಶಶಾಂಕ್ ಖೈತಾನ್ - ಈ ನಾಲ್ವರ ನಿರ್ದೇಶಕರ ಕಥೆಗಳನ್ನು ಆಯ್ದು ನಿರ್ಮಿಸಿದ ಸಂಕಲನವಾಗಿದೆ.
-
It’s here... A collaborative effort, yet uniquely individual. Presenting #AjeebDaastaans with 4 exceptionally talented #DirectorsOfDharma, coming together to weave 4 individual stories that are stranger than reality itself. pic.twitter.com/GMIaJc0QPp
— Karan Johar (@karanjohar) March 19, 2021 " class="align-text-top noRightClick twitterSection" data="
">It’s here... A collaborative effort, yet uniquely individual. Presenting #AjeebDaastaans with 4 exceptionally talented #DirectorsOfDharma, coming together to weave 4 individual stories that are stranger than reality itself. pic.twitter.com/GMIaJc0QPp
— Karan Johar (@karanjohar) March 19, 2021It’s here... A collaborative effort, yet uniquely individual. Presenting #AjeebDaastaans with 4 exceptionally talented #DirectorsOfDharma, coming together to weave 4 individual stories that are stranger than reality itself. pic.twitter.com/GMIaJc0QPp
— Karan Johar (@karanjohar) March 19, 2021
ಟ್ವೀಟ್ ಮಾಡಿ ಟೀಸರ್ ಹಂಚಿಕೊಂಡಿರುವ ಕರಣ್ ಜೋಹರ್, "ಇದು ಒಂದು ಸಹಯೋಗದ ಪ್ರಯತ್ನವಾದರೂ ಅನನ್ಯವಾಗಿದೆ. ಅಜೀಬ್ ದಾಸ್ತಾನ್ಸ್ ಅನ್ನು ಧರ್ಮಾ ಪ್ರೊಡಕ್ಷನ್ನ ನಾಲ್ವರು ಅಸಾಧಾರಣ ಪ್ರತಿಭಾವಂತ ನಿರ್ದೇಶಕರ ಕಥೆಯೊಂದಿಗೆ ಪ್ರಸ್ತುತಪಡಿಸಲಾಗುತ್ತಿದೆ. ವಾಸ್ತವಕ್ಕಿಂತಲೂ ಅಪರಿಚಿತವಾದ ನಾಲ್ಕು ವೈಯಕ್ತಿಕ ಕಥೆಗಳನ್ನು ಒಟ್ಟಿಗೆ ಹೆಣೆಯಲಾಗಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ 'ರಾಬರ್ಟ್'...!
ನಾಲ್ಕು ವಿಭಿನ್ನ ಕಥೆಗಳನ್ನೊಳಗೊಂಡ ಈ ಟೀಸರ್ನಲ್ಲಿ ನಾವು ಫಾತಿಮಾ ಸನಾ ಶೇಖ್, ಜೈದೀಪ್ ಅಹ್ಲಾವತ್, ನುಸ್ರತ್ ಭರೂಚಾ, ಅಭಿಷೇಕ್ ಬ್ಯಾನರ್ಜಿ, ಇನಾಯತ್ ವರ್ಮಾ, ಕೊಂಕಣ ಸೇನ್ ಶರ್ಮಾ, ಅದಿತಿ ರಾವ್ ಹೈದರಿ, ಶೆಫಾಲಿ ಷಾ, ಮಾನವ್ ಕೌಲ್ ಮತ್ತು ತೋತಾ ರಾಯ್ ಚೌಧರಿಯಂತಹ ಪ್ರತಿಭಾವಂತ ನಟ-ನಟಿಯರು ನಟಿಸಿರುವುದನ್ನು ಕಾಣಬಹುದಾಗಿದೆ.