ಮುಂಬೈ(ಮಹಾರಾಷ್ಟ್ರ): ಬಾಲಿವುಡ್ನ ಬ್ಲಾಕ್ ಬಸ್ಟರ್ ಚಿತ್ರ ‘ಕಭಿ ಖುಷಿ ಕಭಿ ಗಮ್’ ಸಿನಿಮಾ ಬಿಡುಗಡೆಯಾಗಿ ಇಂದಿಗೆ (ಮಂಗಳವಾರ) ಬರೋಬ್ಬರಿ 20 ವರ್ಷ ತುಂಬಿದೆ. ಚಿತ್ರ ನಿರ್ಮಾಪಕ ಕರಣ್ ಜೋಹರ್ ವಿಡಿಯೋ ಮೂಲಕ ತಮ್ಮ ಹಳೆ ಘಟನಾವಳಿಗಳನ್ನು ಮೆಲುಕು ಹಾಕಿದ್ದಾರೆ.
ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಕರಣ್ ಇದೇ ವಿಡಿಯೋದಲ್ಲಿ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪರಿಶ್ರಮದಿಂದ ‘ಕಭಿ ಖುಷಿ ಕಭಿ ಗಮ್’ ಚಿತ್ರ 20ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಪ್ರಪಂಚದ ಮೂಲೆ ಮೂಲೆಗಳಿಂದ ಬಂದ ಪ್ರೀತಿಯಿಂದ ಚಿತ್ರ ಮಹಾ ಮೈಲಿಗಲ್ಲು ಸ್ಥಾಪಿಸಲು ಕಾರಣವಾಯಿತು.
ಇದಕ್ಕೆ ಎಷ್ಟು ಕೃತಜ್ಞತೆಯನ್ನು ತಿಳಿಸಿದರೂ ಕಡಿಮೆಯೇ ಅನ್ನಿಸುತ್ತಿದೆ. ಹುಡುಕುತ್ತಾ ಹೋದರೆ ಚಿತ್ರದ ಯಶಸ್ಸಿಗೆ ಹಲವು ಕಾರಣಗಳು ಸಿಗುತ್ತವೆ. ಈ ವಿಷಯಕ್ಕೆ ಬಂದಾಗ ಭಾವನೆಗಳನ್ನು ವ್ಯಕ್ತಪಡಿಸುಲು ನನ್ನ ಬಳಿ ಪದಗಳೇ ಸಾಕಾಗುವುದಿಲ್ಲ ಎಂದಿದ್ದಾರೆ.
- " class="align-text-top noRightClick twitterSection" data="
">
ಸಿನಿಮಾ ರಂಗದದಲ್ಲಿ ಎದುರಾಗುವ ಸವಾಲಿನ ಬಗ್ಗೆ ಮಾತನಾಡಿರುವ ಕರಣ್, ದೊಡ್ಡ ನಟರನ್ನು ಒಂದೇ ಪರದೆ ಮೇಲೆ ತೋರಿಸುವುದೆಂದರೆ ಅದೊಂದು ನಿಜವಾದ ಸವಾಲಿನ ಕೆಲಸ. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್, ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಸೇರಿದಂತೆ ಇತರೆ ನಟ ಮತ್ತು ನಟಿಯರನ್ನು ‘ಕಭಿ ಖುಷಿ ಕಭಿ ಗಮ್’ ಚಿತ್ರದಲ್ಲಿ ತೋರಿಸಲಾಗಿದೆ. ಇದಕ್ಕೆ ಸಹಕಾರ ನೀಡಿದವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ ಅನ್ನಿಸುತ್ತದೆ ಎಂದಿದ್ದಾರೆ.
ಇನ್ನು ಚಿತ್ರದಲ್ಲಿನ ಹಾಡುಗಳನ್ನು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅಂತಾ ಅನ್ನಿಸುತ್ತದೆ. ಇವಾಗಲೂ ಈ ಸಿನಿಮಾದ ಹಲವು ಹಾಡುಗಳನ್ನು ಮದುವೆ-ಮುಂಜಿ, ಸಭೆ-ಸಮಾರಂಭದಲ್ಲಿ ಜನ ಕೇಳುತ್ತಲೇ ಇರುತ್ತಾರೆ. ಹಾಡುಗಳು ಮನಸ್ಸಿನಲ್ಲಿ ಅಷ್ಟು ಬೇರೂರುವೆ.
ಚಿತ್ರಕ್ಕೆ ಹಾಕಲಾದ ಅತ್ಯದ್ಬುತ ಸೆಟ್ ಬಗ್ಗೆ ವರ್ಣನೆ ಮಾಡಲು ಅಸಾಧ್ಯ. ಇದಕ್ಕೆ ಶ್ರಮವಹಿಸಿದ ಸೆಟ್ ವಿನ್ಯಾಸಗಾರ್ತಿ ಶರ್ಮಿಷ್ಟಾ ರಾಯ್, ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ಇದನ್ನು ಅಚ್ಚುಕಟ್ಟಾಗಿ ತೋರಿಸಿದ ಕ್ಯಾಮರಾಮ್ಯಾನ್ ಹಾಗೂ ನಿರ್ದೇಶಕ ಕಿರಣ್ ಡಿಯೋಹಾನ್ಸ್ ಅವರಿಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ.
ಇದನ್ನೂ ಓದಿ: ಪ್ರತಿ ಶುಕ್ರವಾರ ಆರ್ಯನ್ ಖಾನ್ ಎನ್ಸಿಬಿಗೆ ಹೋಗುವ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್