ETV Bharat / sitara

ಆ ಮೂವರೂ ಸೇರಿ ಸುಶಾಂತ್​​​ನನ್ನು ಕೊಂದಿದ್ದಾರೆ...ಕಂಗನಾ ಆರೋಪ ಮಾಡಿದ್ದು ಯಾರ ಮೇಲೆ...? - ಮಹೇಶ್ ಭಟ್ ಮೇಲೆ ಕಂಗನಾ ಆರೋಪ

ಕರಣ್ ಜೋಹರ್, ಆದಿತ್ಯ ಛೋಪ್ರಾ, ಮಹೇಶ್ ಭಟ್ ಮೂವರೂ ಸೇರಿ ಸುಶಾಂತ್​​ನನ್ನು ಕೊಂದಿದ್ದಾರೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ಮಾಧ್ಯಮದವರು ಹಾಗೂ ಕೆಲವು ಸಿನಿಪ್ರಿಯರು ಕೂಡಾ ಸುಶಾಂತ್ ಸಾವಿಗೆ ಹೊಣೆ ಎಂದಿದ್ದಾರೆ.

Kangana Ranaut
ಕಂಗನಾ
author img

By

Published : Sep 2, 2020, 11:41 AM IST

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಬಾಲಿವುಡ್​​ ನಟಿ ಕಂಗನಾ ರಣಾವತ್, ಕೆಲವು ಫಿಲ್ಮ್ ಮೇಕರ್​ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೀಗ ಕಂಗನಾ ಬಾಲಿವುಡ್​​ನ ಮೂವರು ಹೆಸರಾಂತ ಫಿಲ್ಮ್​ ಮೇಕರ್​​​​ಗಳು ಸೇರಿ ಸುಶಾಂತ್​​​​​​​​ನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

Kangana Ranaut
ಕಂಗನಾ ಟ್ವೀಟ್​​​

ಕರಣ್ ಜೋಹರ್​, ಆದಿತ್ಯ ಛೋಪ್ರಾ, ಮಹೇಶ್ ಭಟ್​​​​​​​ ಮೂವರೂ ಸೇರಿ ಸುಶಾಂತ್​​​​​​ನನ್ನು ಕೊಂದಿದ್ದಾರೆ. ಇವರೊಂದಿಗೆ ಕೆಲವು ಪತ್ರಕರ್ತರು ಹಾಗೂ ಜನರು ಸುಶಾಂತ್​​​​​ಗೆ ಮಾನಸಿಕ ಕಿರುಕುಳ ನೀಡಿದ್ದು ನೀವೂ ಕೂಡಾ ಸುಶಾಂತ್ ಸಾವಿಗೆ ಹೊಣೆಯಾಗಿದ್ದೀರಿ ಎಂದು ಕಂಗನಾ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ಕರಣ್ ಜೋಹರ್, ಆದಿತ್ಯ ಛೋಪ್ರಾ, ಮಹೇಶ್ ಭಟ್, ರಾಜೀವ್ ಮಸಂದ್​​, ರಕ್ತಹೀರುವ ರಣಹದ್ದುಗಳಂತಿರುವ ಮಾಧ್ಯಮವು ಸುಶಾಂತ್​​ನನ್ನು ಬೆದರಿಸಿ, ಶೋಷಣೆ ಮಾಡಿ, ಕಿರುಕುಳ ನೀಡಿ ಕೊಂದಿವೆ, ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಕರಣ್ ಜೋಹರ್ ತಮ್ಮ ಮಕ್ಕಳ ಕುರಿತಾಗಿ ಬರೆದಿರುವ ಪುಸ್ತಕದ ಬಗ್ಗೆ ಕೂಡಾ ಕಂಗನಾ ಕಿಡಿ ಕಾರಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ತಾವು ದತ್ತು ಪಡೆದಿರುವ ಅವಳಿ ಮಕ್ಕಳ ಬಗ್ಗೆ ಹಾಗೂ ಮಕ್ಕಳನ್ನು ಸಾಕುವ ಅನುಭವದ ಬಗ್ಗೆ ಬರೆದಿರುವ ಪುಸ್ತಕವನ್ನು ಪ್ರಮೋಟ್ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್​​ ಬಗ್ಗೆ ಪ್ರತಿಕ್ರಿಯಿಸಿ ಕಂಗನಾ ಈ ಆರೋಪ ಮಾಡಿದ್ದಾರೆ.

Kangana Ranaut
ಫಿಲ್ಮ್ ಮೇಕರ್​​​​ಗಳನ್ನು ಸುಶಾಂತ್ ಸಾವಿಗೆ ಹೊಣೆ ಮಾಡಿದ ಕಂಗನಾ

ಇದಕ್ಕೂ ಮುನ್ನ ಕಂಗನಾ, ಕರಣ್ ಜೋಹರ್​​​​ನನ್ನು ಉದ್ದೇಶಿಸಿ ಬಾಲಿವುಡ್​​ ಚಿತ್ರರಂಗದಲ್ಲಿ ಸಿನಿಮಾ ಮಾಫಿಯಾಗೆ ಕರಣ್​ ಜೋಹರ್​​ ಪ್ರಮುಖ ಕಿಂಗ್​ಪಿನ್​ ಎಂದು ಆರೋಪಿಸಿದ್ದರು. 'ಎಷ್ಟೋ ಜನರ ಜೀವನವನ್ನು ಬಲಿ ಪಡೆದು, ಎಷ್ಟೋ ಜನರ ಜೀವನವನ್ನು ಹಾಳು ಮಾಡಿ ಆರಾಮವಾಗಿ ತಿರುಗಾಡಿಕೊಂಡು ಇದ್ದಾರೆ. ಇದುವರೆಗೂ ಆತನ ಮೇಲೆ ಕ್ರಮ ಕೈಗೊಂಡಿಲ್ಲ, ಈಗಲಾದರೂ ಅದನ್ನು ಬಯಸಬಹುದಾ..?' ಎಂದು ಪ್ರಶ್ನಿಸಿ ಕಂಗನಾ ಪ್ರಧಾನಿ ಮೋದಿಗೆ ಆ ಟ್ವೀಟ್ ಟ್ಯಾಗ್ ಮಾಡಿದ್ದರು.

ಜೂನ್ 14 ರಂದು ಸುಶಾಂತ್ ಸಾವನ್ನಪ್ಪಿದಾಗಿನಿಂದ ಬಾಲಿವುಡ್​​​ನಲ್ಲಿ ಸ್ವಜಪಕ್ಷಪಾತದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅಲ್ಲದೆ ಕೆಲವರು ಸ್ಟಾರ್ ಕಿಡ್​​ಗಳ ಚಿತ್ರಗಳನ್ನು ಬಹಿಷ್ಕರಿಸಿದ್ದಾರೆ. ಮಹೇಶ್ ಭಟ್ ಹಾಗೂ ಕರಣ್ ಜೋಹರ್​​ ಇಬ್ಬರನ್ನೂ ಸುಶಾಂತ್ , ಕಂಗನಾ ಅಭಿಮಾನಿಗಳು ನೆಪೋಟಿಸಂಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಲೇ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.