ಮುಂಬೈ (ಮಹಾರಾಷ್ಟ್ರ): ಕಪಿಲ್ ಶರ್ಮಾ ಹಾಗೂ ಅಕ್ಷಯ್ ನಡುವೆ ಒಳ್ಳೆಯ ಗೆಳೆತನವಿದೆ. ಇದು ಅನೇಕ ಬಾರಿ ಸಾಬೀತಾಗಿದೆ. ಆದರೆ, ಅವರ ಮುಂದಿನ ಚಿತ್ರ ‘ಬಚ್ಚನ್ ಪಾಂಡೆ’ ಸಿನಿಮಾದ ಪ್ರಚಾರಕ್ಕಾಗಿ ಅಕ್ಷಯ್ ಅವರು ‘ದಿ ಕಪಿಲ್ ಶರ್ಮಾ ಶೋ’ಗೆ ಬರದಿರಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಹಾಗಾಗಿ ಅಕ್ಷಯ್ ಮತ್ತು ಕಪಿಲ್ ಮಧ್ಯ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಕಪಿಲ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಪಿಲ್ ಶರ್ಮಾ ಅಕ್ಷಯ್ ಅವರು ನನ್ನ "ದೊಡ್ಡ ಸಹೋದರನಿದಂತೆ. ಅವರನ್ನ ನಾನು ಶೀಘ್ರದಲ್ಲೇ ಭೇಟಿಯಾಗಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
“ಆತ್ಮೀಯ ಸ್ನೇಹಿತರೇ, ನನ್ನ ಮತ್ತು ಅಕ್ಷಯ್ ಪಾಜಿ ಬಗ್ಗೆ ಮಾಧ್ಯಮಗಳಲ್ಲಿ ಎಲ್ಲ ಸುದ್ದಿಗಳನ್ನು ಓದುತ್ತಿದ್ದೆ, ನಾನು ಪಾಜಿಯೊಂದಿಗೆ ಮಾತನಾಡಿದ್ದೇನೆ. ಎಲ್ಲವನ್ನೂ ನಾನು ಅವರಿಗೆ ವಿವರಿಸಿದ್ದೇನೆ. ಇದು ಮಿಸ್ ಕಮ್ಯುನಿಕೇಶನ್ನಿಂದ ಆದ ಪ್ರಮಾದ. ಎಲ್ಲವೂ ಸರಿಯಾಗಿದೆ, ಶೀಘ್ರದಲ್ಲೇ ನಾವು ಬಚ್ಚನ್ ಪಾಂಡೆ ಎಪಿಸೋಡ್ ಅನ್ನು ಶೂಟ್ ಮಾಡಲು ಭೇಟಿಯಾಗುತ್ತೇವೆ. ಅವರು ನನ್ನ ದೊಡ್ಡ ಸಹೋದರ, ನನ್ನೊಂದಿಗೆ ಎಂದಿಗೂ ಸಿಟ್ಟಾಗಲು ಸಾಧ್ಯವಿಲ್ಲ..ಧನ್ಯವಾದಗಳು" ಎಂದು ಕಪಿಲ್ ಟ್ವೀಟ್ ಮಾಡಿದ್ದಾರೆ.
ಅಕ್ಷಯ್ ಮತ್ತು ಕಪಿಲ್ ಅವರ ನಡುವೆ ಬಿರುಕು ಮುಡಿದೆ ಎಂದು ಹಲವಾರು ವರದಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಿದ್ದವು. ಇದಕ್ಕೆ ಕಾರಣ ಈ ಹಿಂದೆ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡಿದ್ದರು. ಆಗ ಮೋದಿಗೆ ಮಾವಿನ ಹಣ್ಣಿನ ಬಗ್ಗೆ ಅಕ್ಷಯ್ ಕುಮಾರ್ ಪ್ರಶ್ನೆ ಮಾಡಿದ್ದರು. ಕಪಿಲ್ ಶರ್ಮಾ ತಮ್ಮ ಶೋನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದರು.
‘ನೀವು ಓರ್ವ ದೊಡ್ಡ ರಾಜಕಾರಣಿಯನ್ನು ಸಂದರ್ಶನ ಮಾಡಿರುವಿರಿ. ಈ ಸಂದರ್ಶನದಲ್ಲಿ ಮಾವಿನ ಹಣ್ಣಿನ ಬಗ್ಗೆ ಪ್ರಶ್ನೆಯನ್ನೂ ಕೇಳಿದ್ದಿರಿ’ ಎಂದು ನಗುತ್ತಲೇ ಮಾತನಾಡಿದ್ದರು ಕಪಿಲ್. ಅಕ್ಷಯ್ ಕುಮಾರ್ ‘ಧೈರ್ಯ ಇದ್ದರೆ ಅವರ ಹೆಸರನ್ನು ಹೇಳಿ’ ಎಂದು ಸವಾಲು ಹಾಕಿದ್ದರು. ಅವರ ಮಾತುಕತೆ ಹಾಸ್ಯ ರೀತಿಯಲ್ಲಿ ನಡೆದಿತ್ತು.
ಇದನ್ನು ಪ್ರಸಾರ ಮಾಡದಂತೆ ಅಕ್ಷಯ್ ಕುಮಾರ್ ಅವರು ಕಪಿಲ್ ಶರ್ಮಾಗೆ ಹೇಳಿದ್ದರು. ಈ ಮಾತನ್ನ ಕಪಿಲ್ ಶರ್ಮಾ ವಾಹಿನಿಯವರಿಗೂ ಹೇಳಿದ್ದರು. ಆದರೆ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡುವವರೆಗೆ ಕಪಿಲ್ ಶರ್ಮಾ ಶೋಗೆ ಬರುವುದಿಲ್ಲ ಎಂದು ಅಕ್ಷಯ್ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಒಟ್ಟಿನಲ್ಲಿ ಈಗ ಕಪಿಲ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ಅಕ್ಷಯ್ ಅವರು ಚಿತ್ರ ಬಚ್ಚನ್ ಪಾಂಡೆ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನು ಓದಿ:30ನೇ ವಸಂತಕ್ಕೆ ಕಾಲಿಟ್ಟ ನೋರಾ ಫತೇಹಿ; ಹುಟ್ಟುಹಬ್ಬದ ದಿನದಂದೇ ಕಣ್ಣೀರು ಸುರಿದ ಬಾಲಿವುಡ್ ನರ್ತಕಿ