ಮುಂಬೈ: ಬಾಲಿವುಡ್ ನಟಿ ನಟಿ ಕಂಗನಾ ರಣಾವತ್ (Actress Kangana Ranaut) ಅವರನ್ನು ಶಿವಸೇನೆಯ ಮುಖವಾಣಿ 'ಸಾಮ್ನಾ' ಸಂಪಾದಕೀಯ ( Saamana editorial) ಮೂಲಕ ಟೀಕಿಸಲಾಗಿದೆ.
ರಾಷ್ಟ್ರೀಯತೆ ಮತ್ತು ಹಿಂದುತ್ವವನ್ನು ಶಿವಸೇನೆ ಅಡಮಾನವಿಟ್ಟಿದೆ ಎಂದು ಬಿಜೆಪಿ ಹೇಳಿಕೆ ನೀಡುತ್ತಿದೆ. ಇದು ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡ ಪರಿಣಾಮ. ಆದರೆ, ಕಂಗನಾ ರಣಾವತ್ (Kangana Ranaut) ಅವರು ಭಗತ್ ಸಿಂಗ್ರಿಂದ ವೀರ್ ಸಾವರ್ಕರ್ ವರೆಗೆ ಎಲ್ಲರನ್ನೂ ಭಿಕ್ಷುಕರನ್ನಾಗಿ ಮಾಡಿದ್ದಾರೆ. ಕಂಗನಾ ಪ್ರಕಾರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ. ಮೋದಿಯವರ ಆಡಳಿತವೇ ಸ್ವಾತಂತ್ರ್ಯ, ಉಳಿದದ್ದೆಲ್ಲ ಸುಳ್ಳು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಕಂಗನಾ ತರಾಟೆಗೆ ತೆಗೆದುಕೊಂಡಿದ್ದ ವರುಣ್ ಗಾಂಧಿ
ಕಂಗನಾ ರಣಾವತ್ ಅವರ ಈ ಹೇಳಿಕೆಗೆ ತಕ್ಷಣವೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಬಿಜೆಪಿಯ ವರುಣ್ ಗಾಂಧಿ ಕಂಗನಾ ಅವರ ತಲೆ ಕೆಟ್ಟಿದೆ. ಅವರ ಕಿವುಡುತನದ ಕಾರಣವನ್ನು ಎನ್‌ಸಿಬಿಯ ವಾಂಖೆಡೆ ಮಾತ್ರ ಕಂಡುಹಿಡಿಯಬಹುದು ಎಂದು ತಿರುಗೇಟು ನೀಡಿದ್ದರು.
ಸ್ವಾತಂತ್ರ್ಯ ಯೋಧರಿಗಾದ ಅವಮಾನ ದೇಶ ಸಹಿಸಲ್ಲ: ಸಾಮ್ನಾ
ಇನ್ನು ಕಂಗನಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಕಂಗನಾ ವಿರುದ್ಧ ಮೋದಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸರಿ ಇರುವುದಿಲ್ಲ ಎಂದಿದೆ. ಅಷ್ಟೇ ಅಲ್ಲ ದೇಶ ದ್ರೋಹದ ಆರೋಪದ ಮೇಲೆ ಕಂಗನಾ ಅವರಿಗೆ ನೀಡಿದ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು ವಾಪಸ್ ಪಡೆಯಬೇಕು.
ವೀರರ ಮತ್ತು ಸ್ವಾತಂತ್ರ್ಯದ ಅವಮಾನವನ್ನು ದೇಶ ಎಂದಿಗೂ ಸಹಿಸುವುದಿಲ್ಲ ಎಂದು ಸಾಮ್ನಾ ಸಂಪಾದಕೀಯದಲ್ಲಿ (Saamana editorial) ಬರೆಯಲಾಗಿದೆ.
ಕಾಂಗ್ರೆಸ್ - ಎನ್ಸಿಪಿಯಿಂದಲೂ ಕಂಗನಾ ವಿರುದ್ಧ ವಾಗ್ದಾಳಿ
ಇನ್ನು ಕಾಂಗ್ರೆಸ್ ಹಾಗೂ ಎನ್ಸಿಪಿ ನಟಿ ಕಂಗನಾ ರಣಾವತ್ ವಿರುದ್ಧ ದೇಶದ್ರೋಹದ ಕೇಸ್ ಹಾಕಬೇಕು ಹಾಗೂ ಅವರಿಗೆ ನೀಡಿರುವ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿವೆ. ಅವರ ಹೇಳಿಕೆ ವಿರುದ್ಧ ಕೆಂಡಾಮಂಡಲವಾಗಿವೆ.
ಇದನ್ನೂ ಓದಿ: ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ: ವಿವಾದಾತ್ಮಕ ಹೇಳಿಕೆ ಮೂಲಕ ಟ್ರೋಲ್ಗೆ ಗುರಿಯಾದ ಕಂಗನಾ ರಣಾವತ್