ETV Bharat / sitara

ದೇಶದಲ್ಲಿ ಚೀನಾ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ: ಕಂಗನಾ ರಣಾವತ್‌ ಕರೆ

ಚೀನಾ ದಾಳಿಯನ್ನು ಸಂಪೂರ್ಣವಾಗಿ ಖಂಡಿಸಿರುವ ನಟಿ ಕಂಗನಾ ರಣಾವತ್​, ಡ್ರ್ಯಾಗನ್‌ ದೇಶದ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

Actor Kangana Ranaut
Actor Kangana Ranaut
author img

By

Published : Jun 27, 2020, 4:23 PM IST

ಮುಂಬೈ: ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಬಾಲಿವುಡ್​ ನಟಿ ಕಂಗನಾ ರಣಾವತ್​ ವಿಡಿಯೋ ಮೂಲಕ ಜನರಿಗೆ ಕರೆ ನೀಡಿದ್ದಾರೆ.

ಟ್ವಿಟರ್​​ನಲ್ಲಿ ಎರಡು ನಿಮಿಷದ ವಿಡಿಯೋ ಹಂಚಿಕೊಂಡಿರುವ ನಟಿ, ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಹಾಗೂ ಚೀನಾ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಯೋಧರಿಗೆ ಬೆಂಬಲ ಸೂಚಿಸುವ ಅವಶ್ಯಕತೆ ಇದೆ ಎಂದಿದ್ದಾರೆ.

ಲಡಾಖ್​ನ ಗಾಲ್ವಾನ್​ ವ್ಯಾಲಿ ಪ್ರದೇಶದಲ್ಲಿ ಭಾರತ-ಚೀನಾ ಯೋಧರ ನಡುವೆ ಬಡಿದಾಟ ಉಂಟಾದ ಬಳಿಕ ಚೀನಾ ಸರಕುಗಳನ್ನು ಬಹಿಷ್ಕಾರ ಮಾಡುವಂತೆ ದೇಶಾದ್ಯಂತ ಗಟ್ಟಿ ಧ್ವನಿ ಮೊಳಗುತ್ತಿದೆ. ಈಗಾಗಲೇ ಅನೇಕ ನಟ-ನಟಿಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಕಂಗನಾ ಕೂಡ ಕೈಜೋಡಿಸಿದ್ದಾರೆ.

ಭಾರತದ ಭೂಭಾಗ ಆಕ್ರಮಿಸಿಕೊಳ್ಳುವುದೆಂದರೆ ನಮ್ಮ ದೇಹದ ಭಾಗವನ್ನೇ ಕಿತ್ತು ಹಾಕಿದ ಹಾಗೆ. ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಯೋಧರ ಬಲಿದಾನ ಯಾವುದೇ ಕಾರಣಕ್ಕೂ ಮರೆಯಬಾರದು. ಚೀನಾಗೆ ತಕ್ಕ ರೀತಿಯಲ್ಲಿ ಪಾಠ ಕಲಿಸುವ ಸಮಯ ಬಂದಿದೆ ಕಿಡಿ ನುಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.