ETV Bharat / sitara

ರಕ್ಷಣಾ ಸಚಿವ ರಾಜ್​​ನಾಥ್ ಸಿಂಗ್​​ ಭೇಟಿ ಮಾಡಿದ ಕಂಗನಾ ರಣಾವತ್​​..! - ರಾಜ್​​ನಾಥ್ ಸಿಂಗ್ ಭೇಟಿ ಮಾಡಿದ ಕಂಗನಾ

ಸರ್ವೇಶ್​​​ ಮೇವಾರ ನಿರ್ದೇಶನದಲ್ಲಿ ಕಂಗನಾ ರಣಾವತ್ ಅಭಿನಯಿಸುತ್ತಿರುವ 'ತೇಜಸ್' ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕೋರಲು ಕಂಗನಾ ಹಾಗೂ ಇನ್ನಿತರರು ರಕ್ಷಣಾ ಸಚಿವ ರಾಜ್​​ನಾಥ್ ಸಿಂಗ್​ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಕೆಲವೊಂದು ಫೋಟೋಗಳನ್ನು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Rajnath Singh
ಕಂಗನಾ ರಣಾವತ್​​
author img

By

Published : Dec 14, 2020, 10:38 AM IST

Updated : Dec 14, 2020, 12:35 PM IST

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್ 'ತಲೈವಿ' ನಂತರ ತೇಜಸ್ ಸಿನಿಮಾದಲ್ಲಿ ನಟಿಸುತ್ತಿದ್ದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ಕೆಲವೊಂದು ಫೋಟೋಗಳನ್ನು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಹೋದರಿ ರಂಗೋಲಿ ಚಂದೇಲ್​ ಹಾಗೂ ಇನ್ನಿತರರೊಂದಿಗೆ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಕಂಗನಾ ರಣಾವತ್, ''ರಕ್ಷಣಾ ಸಚಿವರಾದ ರಾಜ್​​ನಾಥ್ ಸಿಂಗ್ ಅವರನ್ನು ಇಂದು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. 'ತೇಜಸ್' ಚಿತ್ರದ ಸ್ಕ್ರಿಪ್ಟನ್ನು ರಾಜ್​​ನಾಥ್ ಸಿಂಗ್ ಹಾಗೂ ಭಾರತೀಯ ವಾಯು ಸೇನೆಯೊಂದಿಗೆ ಹಂಚಿಕೊಂಡಿದ್ದು ಕೆಲವೊಂದು ದೃಶ್ಯಗಳ ಚಿತ್ರೀಕರಣಕ್ಕಾಗಿ ಅನುಮತಿ ಕೋರಿದ್ದೇವೆ'' ಎಂದು ಕಂಗನಾ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಕಂಗನಾ ಯುದ್ಧ ವಿಮಾನದ ಪೈಲೆಟ್ ಆಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್​​ಲುಕ್ ಬಿಡುಗಡೆಯಾಗಿದ್ದು ಕಂಗನಾ, ಯುದ್ಧ ವಿಮಾನದ ಮುಂದೆ ಸಮವಸ್ತ್ರ ಧರಿಸಿ ನಡೆದು ಬರುತ್ತಿರುವ ದೃಶ್ಯವಿದೆ. ಸರ್ವೇಶ್ ಮೇವಾರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: ಆದಿತ್ಯ ಪಂಚೋಲಿ ಮತ್ತು ಹೃತಿಕ್ ರೋಷನ್ ಕರುಣಾಳುಗಳು.. ಕಂಗನಾ ರನೌತ್

ಈ ಮಧ್ಯೆ ಅನಿಲ್ ಕಪೂರ್ ಅಭಿನಯದ 'ಎಕೆ vs ಎಕೆ' ಸಿನಿಮಾ ಒಟಿಟಿ ಪ್ಲಾಟ್​​​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದ್ದು ಚಿತ್ರದ ಪ್ರೋಮೋದಲ್ಲಿ ಭಾರತೀಯ ವಾಯುಸೇನೆಯ ಸಮವಸ್ತ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಅನಿಲ್ ಕಪೂರ್ ವಿಡಿಯೋವೊಂದನ್ನು ಮಾಡಿ ಕ್ಷಮೆ ಕೇಳಿದ್ದರು.

Last Updated : Dec 14, 2020, 12:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.