ಚೆನ್ನೈ: ಇಂಡಿಯನ್-2 ಚಿತ್ರದ ಶೂಟಿಂಗ್ ವೇಳೆ ನಡೆದ ಕ್ರೇನ್ ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರಿಗೆ ಸಮನ್ಸ್ ನೀಡಿದ್ದಾರೆ.
ಫೆಬ್ರವರಿ 19 ರ ರಾತ್ರಿ ಇವಿಪಿ ಫಿಲ್ಮ್ ಸಿಟಿಯಲ್ಲಿ ಸೆಟ್‌ಗಳನ್ನು ನಿರ್ಮಿಸುವಾಗ ಮಧು, ಚಂದ್ರನ್ ಮತ್ತು ಕೃಷ್ಣ ಎಂಬುವರು ಕ್ರೇನ್ ಅಡಿ ಸಿಲುಕಿ ಸಾವನ್ನಪ್ಪಿದ್ದರು ಮತ್ತು 12 ಮಂದಿ ಗಾಯಗೊಂಡಿದ್ದರು. ಇನ್ನು ಈ ಘಟನೆಯಿಂದ ನಟ ಕಮಲ್ ಹಾಸನ್, ನಟಿ ಕಾಜಲ್ ಅಗರ್ವಾಲ್ ಮತ್ತು ನಿರ್ದೇಶಕ ಶಂಕರ್ ಅವರು ಪರಾಗಿದ್ದರು.
ಅಲ್ಲದೇ ಈ ಅಪಘಾತಕ್ಕೆ ಕಾರಣವನ್ನು ಕಂಡುಹಿಡಿಯುವ ಸಲುವಾಗಿ ಅಪಘಾತದ ಸ್ಥಳದಲ್ಲಿದ್ದವರಿಗೂ ಕೂಡ ಪೊಲಿಸರು ಸಮನ್ಸ್ ನೀಡಿದ್ದಾರೆ. ಶೂಟಿಂಗ್ ವೇಳೆ ತೆಗೆದುಕೊಂಡ ಸುರಕ್ಷತಾ ಮುನ್ನೆಚ್ಚರಿಕೆಗಳು ಮತ್ತು ಇತರ ವಿಚಾರಗಳ ಬಗ್ಗೆ ತನಿಖೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ ಕಮಲ್ ಹಾಸನ್ ರಾಜ್ಕಮಲ್ ಬ್ಯಾನರ್ ಅಡಿಯಲ್ಲಿ ರಜನಿಕಾಂತ್ ಅವರ ಮುಂದಿನ ಚಿತ್ರವನ್ನು ನಿರ್ಮಿಸಲಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ 39 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಲೈವಾ ತಮ್ಮ ಮುಂಬರುವ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂಬ ವದಂತಿ ಕೂಡ ಹಬ್ಬಿದೆ.