ETV Bharat / sitara

67ನೇ ಜನ್ಮದಿನದ ಸಂಭ್ರಮದಲ್ಲಿ ಪಂಚಭಾಷಾ ನಟ ಕಮಲ್ ಹಾಸನ್​​.. ಕನ್ನಡದಲ್ಲಿ ನಟಿಸಿದ್ದ ಐದು ಚಿತ್ರಗಳಿವು

6 ದಶಕಗಳ ಸಿನಿಮಾರಂಗದ ಅನುಭವದಲ್ಲಿ ಕಮಲ್ ಹಾಸನ್‌ ಅನೇಕ ಬಗೆಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಜೊತೆಗೆ ಪಂಚಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. 67ನೇ ಜನ್ಮದಿನ ಆಚರಿಸುತ್ತಿರುವ ಕಮಲ್​ ಹಾಸನ್​ ಕನ್ನಡದಲ್ಲಿ ಬಣ್ಣ ಹಚ್ಚಿದ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

author img

By

Published : Nov 7, 2021, 5:22 AM IST

Updated : Nov 7, 2021, 9:23 AM IST

kamal haasan celebrating his 67th birthday, kamal haasan celebrating his 67th birthday news, kamal haasan birthday, actor kamal haasan birthday,  actor kamal haasan birthday news, 67ನೇ ಜನ್ಮದಿನದ ಸಂಭ್ರಮದಲ್ಲಿ ಕಮಲ್​ ಹಾಸನ್​, 67ನೇ ಜನ್ಮದಿನದ ಸಂಭ್ರಮದಲ್ಲಿ ಕಮಲ್​ ಹಾಸನ್​ ಸುದ್ದಿ, ಕಮಲ್​ ಹಾಸನ್​ ಬರ್ತ್​ಡೇ, ಕಮಲ್​ ಹಾಸನ್​ ಬರ್ತ್​ಡೇ ಸುದ್ದಿ,
67ನೇ ಜನ್ಮದಿನದ ಸಂಭ್ರಮದಲ್ಲಿ ಪಂಚಭಾಷ ನಟ ಕಮಲ್ ಹಾಸನ್67ನೇ ಜನ್ಮದಿನದ ಸಂಭ್ರಮದಲ್ಲಿ ಪಂಚಭಾಷ ನಟ ಕಮಲ್ ಹಾಸನ್

ನಟ ಕಮಲ್‌ ಹಾಸನ್‌ಗೆ ಇಂದು 67ನೇ ಜನ್ಮದಿನದ ಸಂಭ್ರಮ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಕಮಲ್ ವೃತ್ತಿ ಬದುಕಿಗೆ ಈಗ 62 ವರ್ಷ ತುಂಬಿದೆ. ತಮಿಳು ನಟನಾದರೂ, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಸಿನಿಮಾಗಳಲ್ಲೂ ನಟಿಸಿ, ಪಂಚಭಾಷಾ ನಟ ಎನಿಸಿಕೊಂಡಿರುವ ಕಮಲ್​ ಚಂದನವನದ ಐದು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಕೋಕಿಲದಲ್ಲಿ ಕಮಲ್‌ ಕಲರವ: 1959ರಲ್ಲಿ ಬಾಲನಟನಾಗಿ ಕಮಲ್‌ ಹಾಸನ್‌ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರೂ ಕನ್ನಡಕ್ಕೆ ಬಂದಿದ್ದು 1977ರಲ್ಲಿ ತೆರೆಗೆ ಬಂದ 'ಕೋಕಿಲ' ಚಿತ್ರದ ಮೂಲಕ. ಬಾಲು ಮಹೇಂದ್ರ ನಿರ್ದೇಶನ ಮಾಡಿದ್ದ 'ಕೋಕಿಲ' ಚಿತ್ರದಲ್ಲಿ ಕಮಲ್‌ಗೆ ವಿಜಯ್‌ಕುಮಾರ್ ಅನ್ನೋ ಪಾತ್ರವಿತ್ತು. ಅವರಿಗೆ ಜೋಡಿಯಾಗಿ ಶೋಭಾ ನಟಿಸಿದ್ದರು. ವಿಶೇಷವೆಂದರೆ, ಈ ಸಿನಿಮಾಗೆ ಅತ್ಯುತ್ತಮ ಛಾಯಾಗ್ರಹಣ ರಾಷ್ಟ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚಿತ್ರಕಥೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಅಲ್ಲದೆ, ಮಲಯಾಳಂ ಭಾಷೆಗೆ 'ಊಮ ಕುಯಿಲ್‌' ಎಂದು ರಿಮೇಕ್‌ ಆದರೆ, ಹಿಂದಿಗೆ 'ಔರ್ ಏಕ್‌ ಪ್ರೇಮ್‌ ಕಹಾನಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. ಸ್ಯಾಂಡಲ್​ವುಡ್​ ಹಿರಿಯ ನಟ ರಮೇಶ್‌ ಅರವಿಂದ್ ಹಿಂದಿ ರಿಮೇಕ್‌ನಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದು ವಿಶೇಷ.

'ತಪ್ಪಿದ ತಾಳ'ದಲ್ಲಿ ಕಮಲ್‌: ಕಮಲ್‌ ಹಾಸನ್‌ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ಕೀರ್ತಿ ನಿರ್ದೇಶಕ ಕೆ. ಬಾಲಚಂದರ್‌ ಅವರದ್ದು. ಕಮಲ್‌ ರೀತಿಯೇ ರಜನೀಕಾಂತ್ ಅವರಿಗೂ ಸಹ ಬಾಲಚಂದರ್ ಕನ್ನಡ-ತಮಿಳಿನಲ್ಲಿ ಏಕಕಾಲಕ್ಕೆ 'ತಪ್ಪಿದ ತಾಳ' ಸಿನಿಮಾ ಮಾಡಿದ್ದರು. ಇದರಲ್ಲಿ ರಜನೀಕಾಂತ್‌ ಹೀರೋ ಆಗಿದ್ದರೆ ಸರಿತಾ ನಾಯಕಿ. ಈ ಚಿತ್ರದಲ್ಲಿ ಅಮ್ರಿತ್ ಲಾಲ್‌ ಅನ್ನೋ ಸಣ್ಣ ಪಾತ್ರವೊಂದಕ್ಕೆ ಕಮಲ್ ಬಣ್ಣ ಹಚ್ಚಿದ್ದರು. ಆ ಪಾತ್ರಕ್ಕೆ ಅವರೇ ಡಬ್‌ ಮಾಡಿರುವುದು ವಿಶೇಷ. 70ರ ದಶಕದಲ್ಲಿ ಕಮಲ್‌ ಸ್ಟಾರ್ ನಟ. ಹೀಗಿದ್ದರೂ, ಈ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ನಿಭಾಯಿಸಿದ್ದು ವಿಶೇಷ.

ಮರಿಯಾ ಮೈ ಡಾರ್ಲಿಂಗ್ ಎಂದ ಕಮಲ್‌: 1980ರಲ್ಲಿ ತೆರೆಕಂಡ ಮತ್ತೊಂದು ದ್ವಿಭಾಷಾ ಚಿತ್ರ 'ಮರಿಯಾ ಮೈ ಡಾರ್ಲಿಂಗ್'. ದುರೈ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ಗೆ ಜೋಡಿಯಾಗಿ ಶ್ರೀಪ್ರಿಯಾ ನಟಿಸಿದ್ದರು. ಅವರಿಗಿಲ್ಲಿ ದ್ವಿಪಾತ್ರ ಅನ್ನೋದು ವಿಶೇಷ. ಅಲ್ಲದೆ, ಈ ಚಿತ್ರದ ಟೈಟಲ್ ಸಾಂಗ್ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಇದರ ಕನ್ನಡ ವರ್ಷನ್‌ನಲ್ಲಿ ಬಾಲಕೃಷ್ಣ, ವಜ್ರಮುನಿ, ಎಂ.ಪಿ. ಶಂಕರ್, ಶಿವರಾಮ್ ಮುಂತಾದವರು ನಟಿಸಿದ್ದರು.

'ಬೆಂಕಿಯಲ್ಲಿ ಅರಳಿದ ಹೂವು': 1977ರಿಂದ 83ರವರೆಗೆ ಕಮಲ್‌ 4 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, 'ಬೆಂಕಿಯಲ್ಲಿ ಅರಳಿದ ಹೂವು' ಚಿತ್ರದ ನಂತರ ಕನ್ನಡ ಸಿನಿಮಾರಂಗದಿಂದ ಅವರು ದೂರ ಉಳಿದಿದ್ದರು.

22 ವರ್ಷಗಳ ನಂತರ ಮರಳಿದ ಕಮಲ್‌: 22 ವರ್ಷಗಳ ಬಳಿಕ ಅವರು 'ರಾಮ ಶಾಮ ಭಾಮ' ಚಿತ್ರದ ಮೂಲಕ ಕನ್ನಡಕ್ಕೆ ಮರಳಿದರು. ರಮೇಶ್‌ ಅರವಿಂದ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ನಟಿ ಶ್ರುತಿಗೆ ಜೋಡಿಯಾಗಿ ಕಮಲ್ ನಟಿಸಿದ್ದರು. ಸಖತ್ ಹಾಸ್ಯಮಯವಾಗಿದ್ದ ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

Last Updated : Nov 7, 2021, 9:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.