ಬಾಲಿವುಡ್ನ ಬಹುನಿರೀಕ್ಷಿತ ಹಾಗೂ ಬಹುತಾರಾಗಣವಿರುವ ‘ಕಳಂಕ್‘ ಸಿನಿಮಾ ತಂಡ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿತ್ತು. ಇದರಲ್ಲಿ ಚಿತ್ರದ ಅದ್ಭುತ ಸೆಟ್ಗಳನ್ನು ನೋಡಿ ಎಲ್ಲರೂ ಆಶ್ವರ್ಯವಾಗಿದ್ದರು. ಇದೀಗ ಟ್ರೇಲರ್ ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ನಿನ್ನೆ ಈ ಟ್ರೇಲರ್ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 12 ಮಿಲಿಯನ್ಗೂ ಹೆಚ್ಚು ಮಂದಿ ಈ ಟ್ರೇಲರ್ ನೋಡಿದ್ದಾರೆ. ಇದು ಕರಣ್ ಜೋಹರ್ ತಂದೆಯ ಕನಸಿನ ಕೂಸು ಎಂದು ಅವರೇ ಹೇಳಿಕೊಂಡಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ನನ್ನ ತಂದೆ ಈ ಸಿನಿಮಾ ಮಾಡಬೇಕು ಎಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರ ಕನಸನ್ನು ಈಗ ಈಡೇರಿಸುತ್ತಿದ್ದೇನೆ ಎಂದು ಕರಣ್ ಹೇಳಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ಮಾಧುರಿ ದೀಕ್ಷಿತ್, ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಆಲಿಯಾ ಭಟ್ , ಆದಿತ್ಯ ರಾಯ್ ಕಪೂರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಬಹಳ ವರ್ಷಗಳ ನಂತರ ಮಾಧುರಿ ಹಾಗೂ ಸಂಜಯ್ ಒಟ್ಟಿಗೆ ನಟಿಸುತ್ತಿದ್ದಾರೆ.
ಭಾರತಕ್ಕೆ ಸ್ವಾತಂತ್ಯ್ರ ಬರುವುದಕ್ಕೂ ಮೊದಲು ನಡೆದ ಪ್ರೇಮಕಥೆಯೊಂದನ್ನು ಸಿನಿಮಾ ರೂಪದಲ್ಲಿ ತೋರಿಸಲಾಗಿದೆ. ಯುವರಾಣಿಯೊಬ್ಬಳಿಗೂ ಸಾಮಾನ್ಯ ವ್ಯಕ್ತಿ ನಡುವೆ ಉಂಟಾಗುವ ಈ ಪ್ರೇಮಕಥೆಗಾಗಿ ಹಳೆಯ ದಿಲ್ಲಿ ಸೆಟ್ ನಿರ್ಮಿಸಲು ಬರೋಬ್ಬರಿ 17 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಟ್ರೇಲರ್ನ ಪ್ರತಿಯೊಂದು ದೃಶ್ಯವೂ ಕಣ್ಣಿಗೆ ಹಬ್ಬದಂತಿದೆ. ಟ್ರೇಲರ್ ನೋಡಿದವರಿಗೆ ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗುವುದು ಖಂಡಿತ.
ಇನ್ನು ಈ ಸಿನಿಮಾವನ್ನು ಕರಣ್ ಜೋಹರ್, ಸಾಜಿದ್ ನದಿಯಾವಾಲಾ, ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಜೊತೆ ಸೇರಿ ನಿರ್ಮಿಸಿದ್ದಾರೆ. ಅಭಿಷೇಕ್ ವರ್ಮಾ ಸಾರಥ್ಯ ವಹಿಸಿರುವ ಈ ಸಿನಿಮಾ ಏಪ್ರಿಲ್ 17 ರಂದು ತೆರೆಗೆ ಬರಲಿದೆ.