ಮುಂಬೈ: ಬಾಲಿವುಡ್ ನಟಿ ಕಾಜೋಲ್ ಇನ್ಸ್ಟಾಗ್ರಾಮ್ನಲ್ಲಿ 10 ಮಿಲಿಯನ್ ಫಾಲೋವರ್ಸ್ ಗಳಿಸಿದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಶನಿವಾರ, ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಫೋಟೋ ಮತ್ತು ವಿಡಿಯೋ ಒಂದನ್ನ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ನು ಈ ಕುರಿತಂತೆ ಅಭಿಮಾನಿಗಳಿಗೆ, "ನನ್ನನ್ನು ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಪ್ರೀತಿ ಪ್ರೋತ್ಸಾಹ ನೀಡಿರುವ ಪ್ರತಿಯೊಬ್ಬರಿಗೂ ಕೃತಜ್ಞತೆ. ಇಂತಿ ನಿಮ್ಮ ಕಾಜೋಲ್" ಎಂದು ಬರೆದುಕೊಂಡಿದ್ದಾರೆ
ಕಭಿ ಖುಷಿ ಕಭಿ ಘ‘ಮ್ ಚಿತ್ರದ ಸಣ್ಣ ಡ್ಯಾನ್ಸ್ ಕ್ಲಿಪ್ ಅನ್ನು ಪೋಸ್ಟ್ ಮಾಡಿ, ತನ್ನ ಸಂತೋಷ ವ್ಯಕ್ತಪಡಿಸಿದ್ದಾರೆ.
ದೇವಿ ಎಂಬ ಕಿರುಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಕಾಜೋಲ್, ನೆಟ್‌ಫ್ಲಿಕ್ಸ್ ಚಿತ್ರ ತ್ರಿಭಂಗಾ ಮೂಲಕ ಡಿಜಿಟಲ್ ವೇದಿಕೆ ಮೂಲಕ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗಿದ್ದಾರೆ.
1980 ರ ದಶಕದ ಉತ್ತರಾರ್ಧದಿಂದ ಆಧುನಿಕ ದಿನದ ವಾತಾವರಣದವರೆಗೆ ಒಂದೇ ಕುಟುಂಬದ ಮೂರು ತಲೆಮಾರುಗಳ ಮೂಲಕ ಒಂದು ಸಂಕೀರ್ಣವಾದ ಕಥೆಯನ್ನು ತ್ರಿಭಂಗ ಚಿತ್ರವನ್ನ ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದ ಕಥಾಹಂದರವು ದೈನಂದಿನ ಜೀವನದಲ್ಲಿ ಕುಟುಂಬದ ಮಹತ್ವವನ್ನು ತಿಳಿಸಲಿದೆ. ಈ ಸಿನಿಮಾವನ್ನ ರೇಣುಕಾ ಶಹಾನೆ ನಿರ್ದೇಶಿಸಿದ್ದಾರೆ.