ಮುಂಬೈ (ಮಹಾರಾಷ್ಟ್ರ): ಇಂದು ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹರಿ ಸಾವನ್ನಪ್ಪಿದ್ದು, ಈ ಸುದ್ದಿ ತಿಳಿದ ನಂತರ ಚಿತ್ರರಂಗದ ಸದಸ್ಯರು ದಿವಂಗತ ಗಾಯಕನ ಮುಂಬೈ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ನಟಿ ಕಾಜೋಲ್, ಮತ್ತು ಅವರ ತಾಯಿ ತನುಜಾ, ಗಾಯಕಿ ಅಲ್ಕಾ ಯಾಗ್ನಿಕ್ ಮತ್ತಿತರರು ಅಂತಿಮ ದರ್ಶನ ಪಡೆದರು.
ಇದಕ್ಕೂ ಮೊದಲು ಬಪ್ಪಿ ಲಾಹಿರಿ ಸಾವಿನ ಕುರಿತು ಭಾವನಾತ್ಮಕ ಟ್ವೀಟ್ ಮಾಡಿರುವ ಕಾಜೋಲ್, "ಇಂದು ನಾವು ಡಿಸ್ಕೋ ರಾಜನನ್ನು ಕಳೆದುಕೊಂಡಿದ್ದೇವೆ, ಬಪ್ಪಿ ಡಾ ನೀವು ಅದ್ಭುತ ಸಂಗೀತ ಸಂಯೋಜಕ ಮತ್ತು ಗಾಯಕ ಮಾತ್ರವಲ್ಲದೇ ಸುಂದರ ವ್ಯಕ್ತಿತ್ವ ಹೊಂದಿರುವವರಾಗಿದ್ದಿರಿ. ಇಂದು ಸಂಗೀತ ಲೋಕದ ಒಂದು ಯುಗದ ಅಂತ್ಯ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಅವರು ಬರೆದುಕೊಂಡಿದ್ದಾರೆ.
ಕಾಜೋಲ್ ಅವರ ಸೋದರ ಸಂಬಂಧಿ ಶರ್ಬಾನಿ ಮುಖರ್ಜಿ ಕೂಡಾ ಬಪ್ಪಿ ಲಹರಿ ಅವರ ಮನೆಗೆ ಇಂದು ಬೆಳಗ್ಗೆ ಭೇಟಿ ನೀಡಿ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಇನ್ನು ಗಾಯಕಿ ಅಲ್ಕಾ ಯಾಗ್ನಿಕ್, ಬಪ್ಪಿ ಲಾಹಿರಿ ಹಲವಾರು ಹಾಡುಗಳಿಗೆ ಧ್ವನಿಯಾಗಿದ್ದರು. ವಿಶೇಷವಾಗಿ ಬಂಗಾಳಿ ಚಲನಚಿತ್ರಗಳಲ್ಲಿ ಹೆಚ್ಚು ಹಾಡುಗಳನ್ನ ಈ ಜೋಡಿ ಹಾಡಿತ್ತು.
ಇದನ್ನೂ ಓದಿ : ಖ್ಯಾತ ಗಾಯಕ, ಸಂಗೀತ ಸಂಯೋಜಕ ಬಪ್ಪಿ ಲಹಿರಿ ಇನ್ನಿಲ್ಲ