ETV Bharat / sitara

ಸ್ಲೈಸ್-ಆಫ್-ಲೈಫ್ ಡ್ರಾಮಾದಲ್ಲಿ ಕಾಜಲ್ ಅಗರ್ವಾಲ್ ಮೋಡಿ! - ಹೈದರಾಬಾದ್

ಬ್ಲಾಕ್​ಬಸ್ಟರ್ ಚಿತ್ರಗಳಾದ ಸಿಂಗಂ, ಮಗಧೀರ ಮತ್ತು ಮರ್ಸಲ್ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾದ ಕಾಜಲ್ ಅಗರ್ವಾಲ್ ಮುಂದಿನ ಮುಂಬರುವ ಸ್ಲೈಸ್-ಆಫ್-ಲೈಫ್ ಡ್ರಾಮಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

kajal-aggarwal-to-headline-sujoy-ghoshs-slice-of-life-drama-deets-inside

author img

By

Published : Jun 4, 2021, 3:39 PM IST

ಹೈದರಾಬಾದ್: ಚಿತ್ರ ನಿರ್ಮಾಪಕ ಸುಜೋಯ್ ಘೋಷ್ ಅವರ ಸ್ಲೈಸ್-ಆಫ್-ಲೈಫ್ ಡ್ರಾಮಾ ಉಮಾ ಚಿತ್ರದಲ್ಲಿ ನಟಿ ಕಾಜಲ್ ಅಗರ್ವಾಲ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಕೌಟುಂಬಿಕ ಕಥೆಯಾಗಿದ್ದು, ಉಮಾ ಆಗಮನದೊಂದಿಗೆ ಚಿತ್ರವು ಬಹುಮುಖಿ ಪಾತ್ರಗಳ ಮೂಲಕ ತೆರೆದುಕೊಳ್ಳುತ್ತದೆ.

ಬ್ಲಾಕ್‌ಬಸ್ಟರ್ ಚಿತ್ರಗಳಾದ ಸಿಂಗಂ, ಮಗಧೀರ ಮತ್ತು ಮರ್ಸಲ್ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾದ ಅಗರ್‌ವಾಲ್​ ಅವರು ಈ ಸಂಬಂಧ ಮಾತನಾಡಿದ್ದು, ಉಮಾ ಜಗತ್ತಿನಲ್ಲಿ ಆಳವಾಗಿ ಅಧ್ಯಯನ ಮಾಡಲು ಉತ್ಸುಕಳಾಗಿದ್ದೇನೆ. ನಾನು ನಟಿಯಾಗಿ ನನಗೆ ಸವಾಲಿನ ಸ್ಕ್ರಿಪ್ಟ್‌ಗಳಿಗೆ ಗ್ರೀನ್​ ಸಿಗ್ನಲ್​ ನೀಡಲು ಉತ್ಸುಕಳಾಗಿದ್ದೇನೆ. ಉಮಾವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ನಾನು ಸಂತಸ ಪಡುತ್ತೇನೆ ಎಂದು ಹೇಳಿದ್ದಾರೆ.

ಕೊರೊನಾದ ಎಲ್ಲ ಮಾನದಂಡಗಳನ್ನು ಪರಿಗಣಿಸಿ 2021ರ ದ್ವಿತೀಯಾರ್ಧದಲ್ಲಿ ಉಮಾ ಚಿತ್ರೀಕರಣ ಮುಗಿಸುವ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇನ್ನು ಚಿತ್ರ ತಯಾರಕರು ಶೀಘ್ರದಲ್ಲೇ ಇತರ ಪಾತ್ರ ವರ್ಗದ ಸದಸ್ಯರ ಹೆಸರನ್ನು ಪ್ರಕಟಿಸಲಿದ್ದಾರೆ.

ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಕಾಣಿಸಿಕೊಂಡ ಅಗರ್‌ವಾಲ್ ಇತ್ತೀಚೆಗೆ ಡಿಸ್ನಿ + ಹಾಟ್‌ಸ್ಟಾರ್ ಸರಣಿ ಲೈವ್ ಟೆಲಿಕಾಸ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.