ಇತ್ತೀಚೆಗೆ ನಟ ನಟಿಯರು ತಾವು ಧರಿಸುವ ಉಡುಪುಗಳಿಂದಲೇ ಫೇಮಸ್ಸಾಗುತ್ತಿದ್ದಾರೆ. ಇದೀಗ ಇವರ ಪಟ್ಟಿಗೆ ಅರ್ಜುನ್ ರೆಡ್ಡಿ ರಿಮೇಕ್ ಸಿನಿಮಾವಾದ ಕಬೀರ್ ಸಿಂಗ್ ಸಿನಿಮಾದ ಹೀರೋಯಿನ್ ಆಗಿ ನಟಿಸಿದ್ದ ಕೈರಾ ಅಡ್ವಾಣಿ ಸೇರಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಹೌದು ಈ ಹಿಂದೆ ಕಬೀರನ ಜೊತೆ ಹಾಟ್ ಕಿಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದ್ದ ಕೈರಾ ಇದೀಗ ತಮ್ಮ ಧಿರಿಸಿನಿಂದಲೇ ಫೇಮಸ್ಸಾಗುತ್ತಿದ್ದಾರೆ.
ಕೈರಾ ಅಡ್ವಾಣಿ ಇತ್ತೀಚೆಗೆ ಫೋಟೋ ಶೂಟ್ ನಡೆಸಿದ್ದು, ಅದರಲ್ಲಿ ಹಳದಿ ಬಣ್ಣದ ಗೌನು ಧರಿಸಿದ್ದಾರೆ. ಆ ಗೌನು ನೋಡಲು ಮ್ಯಾಗಿ ರೀತಿ ಇದೆ. ಕೊಂಚ ಕರ್ಲಿ ಹೇರ್ಸ್ನಲ್ಲಿ ಕಾಣಿಸಿಕೊಂಡಿದ್ದು, ಟ್ರೋಲಿಗರಿಂದ ಫೇಮಸ್ಸಾಗುತ್ತಿದ್ದಾರೆ.
ಕೈರಾ ಅಡ್ವಾಣಿಯ ಡ್ರೆಸ್ ನೋಡಿದ ಕೆಲವು ನೆಟ್ಟಿಗರು ನಿಮ್ಮ ಡ್ರೆಸ್ ನೋಡುತ್ತಿದ್ದರೆ ನಮಗೆ ಮ್ಯಾಗಿ ತಿನ್ನಬೇಕೆನಿಸುತ್ತಿದೆ ಎಂದು ಕಮೆಂಟ್ ಕೂಡಾ ಮಾಡಿದ್ದಾರಂತೆ.